ನವಲಗುಂದ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ತಾಲೂಕ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಲಿಂಗರಾಜ ವೃತ್ತದಿಂದ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟಿಸಿ, ತಹಸೀಲ್ದಾರ ಸುಧೀರ್ ಸಾಹುಕಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಮಾತನಾಡಿ, ಬಿಜೆಪಿ ಅವರು ಏನು ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲ. ತಮ್ಮದೇ ಆದ ಆರ್.ಎಸ್.ಎಸ್ ಸಂವಿಧಾನ ಸೃಷ್ಟಿಮಾಡಲು ಹೊರಟಿದ್ದಾರೆ. ತಾವುಗಳು ಅಂಬೇಡ್ಕರ್ ಸಂವಿಧಾನದಿಂದಲೆ ಅಧಿಕಾರದಲ್ಲಿ ಇದ್ದೀವಿ ಅನ್ನುವ ಪರಿಜ್ಞಾನವೇ ಇಲ್ಲ ಅವರಿಗೆ ಅಧಿಕಾರ ಇದೆ ಅಂತ ಏನು ಮಾಡಲು ಹೊರಟರೆ ಅದು ನಡೆಯುವುದಿಲ್ಲ ಕೂಡಲೇ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ನಂತರ ಪರಿಶಿಷ್ಟ ಜಾತಿ ನವಲಗುಂದ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ದೊಡಮನಿ ಮಾತನಾಡಿ, ಅಧಿವೇಶನದಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಅಮಿತ್ ಶಾ ಅವರು, ಈಚೆಗೆ ಅಂಬೇಡ್ಕರ್ ಎಂದು ಹೇಳುವುದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಎನ್ನುವ ಬದಲಿಗೆಭಗವಂತನ ಜಪ ಮಾಡಿದರೆ ಏಳು ಜನ್ಮಕ್ಕೆ ಆಗುವಷ್ಟು ಪುಣ್ಯ ದೊರೆಯುತ್ತದೆ ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಘೋರ ಅಪಮಾನ ಮಾಡಿದ್ದಾರೆ ಎಂದರು.
ಆರ್.ಎಚ್.ಕೋನರಡ್ಡಿ, ಕುಮಾರ ಮಾದರ, ಪರಶುರಾಮ ಹೊನಕೇರಿ, ಸಂಗಪ್ಪ ಮಾದರ, ಕುಮಾರ ಲಕ್ಕಮ್ಮನವರ, ರಾಜು ನಡುವಿನಮನಿ, ಶಿವಾನಂದ ಛಲವಾದಿ, ನಂದಿನಿ ಹಾದಿಮನಿ, ಅನ್ನಪೂರ್ಣ ಸುಣಗಾರ, ಶಿವು ಪೂಜಾರ, ಫರಿದಾಬೇಗಂ ಬಬರ್ಚಿ, ಹಣಮಂತ ಹುಳಕನ್ನವರ, ಬಸು ಕಲ್ಲಣ್ಣವರ, ರಿಯಾಜ ನಾಶಿಪುಡಿ, ಉಮೇಶ ಮಾದರ, ಮಾಂತೇಶ ಛಲವಾದಿ, ವಿಕಾಸ ತದ್ದೇವಾಡಿ ಹಾಜರಿದ್ದರು.
Kshetra Samachara
26/12/2024 03:37 pm