ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಿಡಬ್ಲ್ಯೂಡಿ ರಸ್ತೆ ನಿರ್ಮಾಣ, ತಾತ್ಕಾಲಿಕ ಬಸ್ ಬಂದ್ ಜನ ಹೈರಾಣ !

ಕುಂದಗೋಳ : ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡುತ್ತಿರುವ ರಸ್ತೆ ಪ್ರಗತಿ ಕಾರಣ ಹಿರೇಹರಕುಣಿ ಮತ್ತು ಚಿಕ್ಕಹರಕುಣಿ ಗ್ರಾಮದ ಜನತೆ ಸಾರಿಗೆ ಬಸ್ ಸಂಪರ್ಕ ಕಳೆದುಕೊಂಡಿದ್ದಾರೆ.

ಹೌದು ! ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಿರೇಹರಕುಣಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಕಾರಣ, ಸಾರಿಗೆ ಬಸ್ ವ್ಯವಸ್ಥೆ ಪರ್ಯಾಯ ಮಾರ್ಗ ಇಲ್ಲದೆ ತಟಸ್ಥವಾಗಿದೆ.

ಕಮಡೊಳ್ಳಿ ಹಿರೇಹರಕುಣಿ, ಚಿಕ್ಕ ಹರಕುಣಿ ಮಾರ್ಗವಾಗಿ ತರ್ಲಘಟ್ಟ ಸಂಪರ್ಕ ಮಾಡುತ್ತಿದ್ದ ಸಾರಿಗೆ ಇದೀಗ ನೇರವಾಗಿ ತರ್ಲಘಟ್ಟ ಸಂಪರ್ಕ ಮಾಡುತ್ತಾ ಹಿರೇಹರಕುಣಿ ಚಿಕ್ಕ ಹರಕುಣಿ ಮಾರ್ಗದ ಸಂಚಾರ ಬಂದ್ ಮಾಡಿವೆ.

ಈ ಪರಿಣಾಮ ಹಿರೇಹರುಕುಣಿ ಗ್ರಾಮದ ಉದ್ಯೋಗಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸಾರ್ವಜನಿಕರು ಕಾಲ್ನಡಿಗೆ ಸಂಚಾರ ಸಾಕಾಗಿ ಸಾರಿಗೆ ಬಸ್ ವ್ಯವಸ್ಥೆಗೆ ಆಗ್ರಹಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಗ್ವಾದ ಮಾಡಿದ್ದಾರೆ.

ಸದ್ಯ ತರ್ಲಘಟ್ಟ ತಲುಪುವ ಸಾರಿಗೆ ಬಸ್ ಪುನಃ ಹಿರೇಹರಕುಣಿ ತಲುಪಿ ಪ್ರಯಾಣಿಕರನ್ನು ಸಾಗಿಸಲಿ ಎಂದು ಜನರು ಒತ್ತಾಯ ಮಾಡಿದ್ದಾರೆ.

ಒಟ್ಟಾರೆ ರಸ್ತೆ ನಿರ್ಮಾಣ ಖುಷಿಯಾದರೇ ಸಾರಿಗೆ ಬಸ್ ಸಂಪರ್ಕ ಇಲ್ಲದೆ ಇರುವುದು ಜನರಲ್ಲಿ ಬೇಸರ ತಂದಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Somashekar
Kshetra Samachara

Kshetra Samachara

27/12/2024 10:10 am

Cinque Terre

18.91 K

Cinque Terre

0

ಸಂಬಂಧಿತ ಸುದ್ದಿ