ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಾಡಹಗಲೇ ಮನೆ ಕಳ್ಳತನ - ಚಿನ್ನಾಭರಣ, 3 ಲಕ್ಷ ಹಣ ಕದ್ದೊಯ್ದ ಕಳ್ಳರು

ಕುಂದಗೋಳ: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಸೇರಿ 3 ಲಕ್ಷ ರೂಪಾಯಿ ನಗದು ಹಣ ಕದ್ದು ಪರಾರಿಯಾದ ಘಟನೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆದಿದೆ.

ಡಿಸೆಂಬರ್ 22 ರಂದು ಹಾಡಹಗಲೇ ಮಧ್ಯಾಹ್ನ ಮಲ್ಲಪ್ಪ ಮೂಗಪ್ಪ ನರಗುಂದ ಎಂಬುವರ ಮನೆ ಕೀಲಿ ಮುರಿದು ಒಳ ನುಗ್ಗಿದ ಕಳ್ಳರು ಟ್ರಜರಿ ಬಾಗಿಲು ತೆರೆದು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 5 ಗ್ರಾಂ ತೂಕದ ಚಿನ್ನದ ಕಿವಿ ಓಲೆ, 2 ಗ್ರಾಂ ತೂಕದ ಮಾಂಗಲ್ಯದ ಗುಂಡು, 3 ಲಕ್ಷ ರೂಪಾಯಿ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

27/12/2024 02:28 pm

Cinque Terre

15.93 K

Cinque Terre

0

ಸಂಬಂಧಿತ ಸುದ್ದಿ