ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಕಳ್ಳರ ಹಾವಳಿಗೆ ಬ್ರೇಕ್ ಯಾವಾಗ? ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗುತ್ತಾ ಪೊಲೀಸ್ ಇಲಾಖೆ?

ಅಳ್ನಾವರ: ಇತ್ತೀಚಿನ ದಿನಗಳಲ್ಲಿನ ತಾಲೂಕು ಸೇರಿದಂತೆ ಹಳ್ಳಿಗಳಲ್ಲಿ ದರೋಡೆ,ಕಳ್ಳತನ,ಅಹಿತಕರ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಇದಕ್ಕೆ ಸಾಕ್ಷಿ ಎಂಬಂತೆ ಕೋಗಿಲಗೇರಿ ಹಾಗೂ ಕಾಸೇನಟ್ಟಿ ಗ್ರಾಮಗಳಲ್ಲಿ ಮೊನ್ನೆ ನಡೆದ ಸರಣಿ ಕಳ್ಳತನಗಳೇ ಸಾಕ್ಷಿ. ಇದರಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದೆ.ಬದುಕಿನ ಸಂಘರ್ಷಕ್ಕಾಗಿ ದುಡಿಯಲು ಮನೆ ಬಿಟ್ಟು ತೆರಳುವ ಕೂಲಿಕಾರರಿಗೆ ಸರಣಿ ಕಳ್ಳತನದ ಪ್ರಕರಣಗಳು ನಿದ್ದೆಗೆಡಿಸಿವೆ.

ಕಳ್ಳತನದ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ಬೆನ್ನಲ್ಲೇ ತಾಲೂಕಿನ ಬೆನಚಿ,ಅರವಟಗಿ, ಕಡಬಗಟ್ಟಿ ಹಾಗೂ ಹೊನ್ನಾಪುರ ಗ್ರಾಮ ಪಂಚಾಯಿತಿಯವರು ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧ್ವನಿ ವರ್ಧಕಗಳನ್ನ ಬಳಸಿ ಕಳ್ಳರ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ ಮನೆ ಬಿಟ್ಟು ತೆರಳುವ ಮುನ್ನ ಮನೆಗಳಿಗೆ ಭದ್ರವಾಗಿ ಬೀಗ ಹಾಕಬೇಕು,ಸಾಮಾಜಿಕ ಜಾಲತಾಣಗಳಲ್ಲಿ ಹೊರಗೆ ಹೋಗಿರುವ ಬಗ್ಗೆ ಮಾಹಿತಿಯನ್ನ ಹಂಚಬಾರದು ಹಾಗೂ ಊರಿಗೆ ಬರುವ ವ್ಯಾಪಾರಸ್ಥರ ಬಗ್ಗೆ ಗಮನವಿರಬೇಕು ಎಂಬಿತ್ಯಾದಿ ಮಾಹಿತಿಗಳನ್ನ ಗ್ರಾಮ ಪಂಚಾಯಿತಿಯವರು ಹಂಚುತ್ತಿದ್ದಾರೆ.

ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ಕಳ್ಳತನದ ಜೊತೆಗೆ ಅನೈತಿಕ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆಯ ಬಗ್ಗೆ ಅಪಸ್ವರ ಎದ್ದಿದ್ದು,ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಎಡುವುತ್ತಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.ಇನ್ನಾದರೂ ಕಳ್ಳತನದ ಪ್ರಕರಣಕ್ಕೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/12/2024 08:59 pm

Cinque Terre

92.85 K

Cinque Terre

0

ಸಂಬಂಧಿತ ಸುದ್ದಿ