ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: 'ಹಿಂದೂ ಪರಂಪರೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಮೊದಲನೇ ಸ್ಥಾನವಿದೆ'

ಚಳ್ಳಕೆರೆ: ಮನಸ್ಸನ್ನು ಕೇಂದ್ರೀಕರಿಸುವ ಸ್ಥಳಗಳೆಂದರೆ ಅದುವೇ ದೇವಸ್ಥಾನಗಳು ಎಂದು ಚಳ್ಳಕೆರೆ ನಿವೃತ್ತ ತಹಶಿಲ್ದಾರ್ ಎನ್. ರಘುಮೂರ್ತಿ ಹೇಳಿದರು.

ತಾಲ್ಲೂಕಿನ ತಳಕು ಹೋಬಳಿಯ ಬಂಡೆ ತಿಮ್ಮಲಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತದ ಹಿಂದೂ ಪರಂಪರೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಮೊದಲನೇ ಸ್ಥಾನವಿದೆ. ಇದು ನಮ್ಮಗಳ ನಾಗರೀಕತೆಗಳಿಂದ ಬಂದಂತ ಬಳುವಳಿ ಶ್ರೀ ರಾಮಾಯಣ ಮತ್ತು ಗೀತೆಗಳು ಉಪದೇಶಗಳಷ್ಟೇ ಮೌಲ್ಯಗಳನ್ನು ದೇವಸ್ಥಾನಗಳ ಕಠಿಣ ವೃತ, ಪೂಜಾ ವಿಧಿ ವಿಧಾನಗಳಿಂದ ಮತ್ತು ಉತ್ತಮ ನಡವಳಿಕೆಗಳಿಂದ ಪಡೆಯಬಹುದು. ಇದಕ್ಕೆ ಆಂಜನೇಯ ನಮಗೆ ಉದಾಹರಣೆ. ದಾಸನಾದರೂ ಕೂಡ ಶ್ರೀರಾಮನಿಗಿಂತ ಉತ್ಕೃಷ್ಟವಾದ ಸಾಲಿಗೆ ಆಂಜನೇಯ ನಿಲ್ಲುತ್ತಾನೆ. ಶ್ರದ್ಧೆ ನಿಷ್ಠೆ ಮತ್ತು ಭಕ್ತಿ ಇವುಗಳಿಗೆ ಮುಖ್ಯ ಕಾರಣ. ಈ ರಥೋತ್ಸವದ ಮುಖಾಂತರ ನಾವೆಲ್ಲರೂ ಕೂಡ ಈ ಬರುವ ವರ್ಷ ಸನ್ನಡತೆ ಮತ್ತು ಸನ್ಮಾರ್ಗದಲ್ಲಿ ನಡೆಯೋಣ ಮತ್ತು ಸಕಲ ಸೌಭಾಗ್ಯವನ್ನು ಕೊಟ್ಟು ನಮ್ಮನ್ನು ಬೆಳಕಿನ ಕಡೆಗೆ ಕೊಂಡೊಯ್ಯಲಿ ಎಂದು ಆಂಜನೇಯ ನನ್ನ ಪ್ರಾರ್ಥಿಸೋಣ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

22/12/2024 04:09 pm

Cinque Terre

440

Cinque Terre

0

ಸಂಬಂಧಿತ ಸುದ್ದಿ