ಚಳ್ಳಕೆರೆ: ಒಳ ಮೀಸಲಾತಿ ಶೀಘ್ರ ಜಾರಿಗಾಗಿ ಚಳ್ಳಕೆರೆ ತಾಲೂಕು ಕಚೇರಿಗೆ ಪಾದಯಾತ್ರೆ ನಡೆಸಲು ತಳಕು- ನಾಯಕನಹಟ್ಟಿ ಹೋಬಳಿಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ತಳಕು ಗರಣಿ ಕ್ರಾಸ್‌ನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನನ 2 ಗಂಟೆ ಸಮಯಕ್ಕೆ ಸುಮಾರು ಒಂದು ಸಾವಿರ ಜನಸಂಖ್ಯೆಯೊಂದಿಗೆ ಕಾಲ್ನಡಿಗೆ ಮೂಲಕ ಒಳ ಮೀಸಲಾತಿಯನ್ನು ಶೀಘ್ರವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಚಳ್ಳಕೆರೆ ತಾಲೂಕು ಕಚೇರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಸುಮಾರು 15 ಕಿಲೋ ಮೀಟರ್ ವ್ಯಾಪ್ತಿಯ ಪಾದಯಾತ್ರೆಯ ಉದ್ದಕ್ಕೂ ತಮಟೆ ವಾದ್ಯ ವಿವಿಧ ಘೋಷಣೆಗಳನ್ನು ಅಂಬೇಡ್ಕರ್ ತತ್ವದ ಅಡಿಯಲ್ಲಿ ಒಳ ಮೀಸಲಾತಿ ಜಾರಿಗಾಗಿ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿ ಹಳ್ಳಿಯಿಂದ ಜನಾಂಗದ ಆಂದೋಲನದ ಮೂಲಕ ತಾಲೂಕ ಕಚೇರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
PublicNext
19/12/2024 08:53 am