ಶಿವಮೊಗ್ಗ: ಶಸ್ತ್ರಚಿಕಿತ್ಸೆಗಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಈಗಾಗಲೇ ಮಿಯಾಮಿ ತಲುಪಿದ್ದಾರೆ. 24ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಳೆ ಸಂಜೆ ನಾನೂ ಕೂಡ ಅಲ್ಲಿಗೆ ತೆರಳಲಿದ್ದೇನೆ. ಚಿಕಿತ್ಸೆ ನಡೆಯುವಾಗ ನಾನೂ ಕೂಡ ಅವರ ಜೊತೆಯಲ್ಲಿ ಇರುತ್ತೇನೆ. ವಿಶ್ವದ ಬೆಸ್ಟ್ ಡಾಕ್ಟರ್ ಅವರಿಗೆ ಚಿಕಿತ್ಸೆ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಇರಲಿದ್ದಾರೆ. ಬಳಿಕ ಒಂದು ತಿಂಗಳ ಕಾಲ ಅಲ್ಲೆ ಇದ್ದು, ಒಂದುವರೆ ತಿಂಗಳ ನಂತರ ಶಿವಣ್ಣ ಬೆಂಗಳೂರಿಗೆ ಬರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಅಭಿಮಾನಿಗಳ ಅಶೀವಾರ್ದವೇ ಅವರಿಗೆ ಶ್ರೀರಕ್ಷೆ. ಶಿವಣ್ಣ ಶೀಘ್ರದಲ್ಲಿಯೇ ಗುಣಮುಖರಾಗುತ್ತಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
PublicNext
21/12/2024 04:13 pm