ಚಿತ್ರದುರ್ಗ: ಈ ಜಾಗದಲ್ಲಿ ಮೈಮರೆತು ವಾಹನ ಚಲಾಯಿಸಿದರೆ ಅಪಘಾತ ಪಕ್ಕಾ ಎನ್ನುವ ಶೀರ್ಷಿಕೆ ಅಡಿಯಲ್ಲಿ ಕಳೆದ ಐದು ದಿನಗಳ ಹಿಂದೆ ಅಷ್ಟೇ ಪಬ್ಲಿಕ್ ನೆಕ್ಸ್ಟ್ ಸುದ್ದಿ ಬಿತ್ತರಿಸಿತ್ತು. ಸುದ್ದಿಗೆ ಎಚ್ಚೆತ್ತ ಅಧಿಕಾರಿಗಳು ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ದಿನನಿತ್ಯ ವಾಹನ ಸವಾರರು ಒಂದಲ್ಲಾ ಒಂದು ರೀತಿ ಫಜೀತಿಗೆ ಸಿಲುಕುತ್ತಿದ್ದರು. ಅದರ ನಡುವೆ ಸಣ್ಣಪುಟ್ಟ ಅಪಘಾತಗಳು, ಇತರೆ ಅನೈತಿಕ ಚಟುವಟಿಕೆಗಳ ಸರಿ ತಪ್ಪು ಗುರುತಿಸಲು ಪೊಲೀಸರು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣಗೊಂಡಿತ್ತು ಎನ್ನುವ ವಿಚಾರವನ್ನು ಇಟ್ಟುಕೊಂಡು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತು. ಸುದ್ದಿಗೆ ಎಚ್ಚೆತ್ತ ಚಿತ್ರದುರ್ಗ ನಗರಸಭೆ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿ ಸಂಚಾರಿ ಪೊಲೀಸರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
PublicNext
22/12/2024 02:05 pm