ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್ 22ರಂದು ಪೊಲೀಸ್ ಡಿಆರ್ ಗ್ರೌಂಡ್ ನಲ್ಲಿ ಮ್ಯಾರಥಾನ್ ಓಟ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪೊಲೀಸ್  ಇಲಾಖೆ, ಓನಕೆ ಓಬವ್ವ ಕ್ರೀಡಾಂಗಣದ ಕ್ರೀಡಾಪಟುಗಳ ಸಂಘ, ಟರ್ಬೋ ಸ್ಟೀಲ್ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ-2024ರ ಅಡಿಯಲ್ಲಿ ಇದೇ ಡಿ.22ರಂದು ಬೆಳಿಗ್ಗೆ 7ಕ್ಕೆ ಚಿತ್ರದುರ್ಗ ನಗರದಲ್ಲಿ “ಮ್ಯಾರಥಾನ್ ಓಟ” ಆಯೋಜಿಸಲಾಗಿದೆ.  

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳು, ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆ, ಸ್ವತ್ತು ಕಳವು ಅಪರಾಧಗಳು, ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟಗಳನ್ನು ತಡೆಗಟ್ಟುವ ಬಗ್ಗೆ ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ “5 ಕಿಲೋಮೀಟರ್‍ಗಳ ಮ್ಯಾರಾಥಾನ್ (5 K Jaagruth Run-2024)"  ಆಯೋಜಿಸಿದೆ.

ಮ್ಯಾರಾಥಾನ್ ಚಿತ್ರದುರ್ಗ ನಗರದ ಡಿ.ಎ.ಆರ್ ಪರೇಡ್ ಮೈದಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ 5 ಕಿ.ಮೀಗಳ ಅಂತರ ಕ್ರಮಿಸಿದ ನಂತರ ಡಿ.ಎ.ಆರ್ ಪರೇಡ್‍ನಲ್ಲಿಯೇ ಮುಕ್ತಾಯವಾಗಲಿದೆ.

ಮ್ಯಾರಾಥಾನ್‍ನಲ್ಲಿ ವಿಜೇತರಾದವರಿಗೆ 1ನೇ ಬಹುಮಾನ 5,000/- ರೂಗಳು, 2ನೇ ಬಹುಮಾನ 4,000/- ರೂಗಳು, 3ನೇ ಬಹುಮಾನ 3,000/- ರೂಗಳು ನಗದು ಬಹುಮಾನ ನೀಡಲಾಗುವುದು. ಮ್ಯಾರಾಥಾನ್‍ನಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಸಹ  ಪೊಲೀಸ್   ಇಲಾಖೆಯಿಂದ ಟೀ-ಶರ್ಟ್ ಮತ್ತು ಪ್ರಶಂಸನ ಪತ್ರ ನೀಡಲಾಗುವುದು.

ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದರಿ ಮ್ಯಾರಾಥಾನ್‍ನಲ್ಲಿ ಪಾಲ್ಗೊಳ್ಳುವುದರ ಮೂಲಕ “ಅಪರಾಧಗಳನ್ನು ತಡೆಗಟ್ಟಲು”  ಪೊಲೀಸ್  ಇಲಾಖೆಯೊಂದಿಗೆ ಕೈ ಜೋಡಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

21/12/2024 03:28 pm

Cinque Terre

240

Cinque Terre

0

ಸಂಬಂಧಿತ ಸುದ್ದಿ