ಹೊಳಲ್ಕೆರೆ: ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ನ ಮುರಾರ್ಜಿ ಶಾಲೆ ಮತ್ತು ವಿದ್ಯಾರತ್ನ ಶಾಲೆಗಳಲ್ಲಿ ಅಪರಾಧ ತಡೆ ಮಾಸ ಚರಣೆ ಕಾರ್ಯಕ್ರಮದ ಅಂಗವಾಗಿ ಚಿತ್ರಹಳ್ಳಿ ಪೊಲೀಸ್ ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಮುರಾರ್ಜಿ ಶಾಲೆ ಮತ್ತು ವಿದ್ಯಾರತ್ನ ಶಾಲೆಗಳಿಗೆ ಭೇಟಿ ನೀಡಿದ ಚಿತ್ರಹಳ್ಳಿ ಗೇಟ್ ನ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕಾಂತರಾಜ್ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಮಾತನಾಡಿ ವಿದ್ಯಾರ್ಥಿಗಳು ಮನೆಯಲ್ಲಿರುವಂತಹ ಬೈಕುಗಳನ್ನ ತಂದೆ ತಾಯಿಗಳಿಗೆ ಗೊತ್ತಿಲ್ಲದಂತೆ ರಸ್ತೆಗೆ ಅವುಗಳನ್ನು ತಂದು ಚಲಾವಣೆ ಮಾಡಿದರೆ ದೊಡ್ಡ ಮಟ್ಟದ ದಂಡವನ್ನು ವಿಧಿಸಲಾಗುವುದು ಜೊತೆಗೆ ಪ್ರತಿಯೊಬ್ಬರೂ ಕೂಡ ಬೈಕ್ ಓಡಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು ಇದರಿಂದ ತಮ್ಮ ಜೀವ ರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಚಿತ್ರಹಳ್ಳಿ ಗೇಟ್ ಬಳಿ ಇರುವ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ಆಗಿವೆ. ಇದರಲ್ಲಿ ಬೈಕ್ ಅಪಘಾತಗಳೆ ಹೆಚ್ಚಾಗಿವೆ, ಹಾಗಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ತಿಳಿಸಿದರು.
Kshetra Samachara
21/12/2024 07:12 pm