ಚಳ್ಳಕೆರೆ : ಡಿ.21. ಪಟ್ಟಣ ಪಂಚಾಯತಿ ವ್ಯಾಪ್ತಿಯ 14ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರ ಆದ ನಾವು ಸುಮಾರು 35 ರಿಂದ 40 ವರ್ಷಗಳಿಂದ ಖಾಸಗಿ ಜಮೀನಿನಲ್ಲಿ ಗುಡಾರ ಮತ್ತು ಬಟ್ಟೆ ಟೆಂಟುಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ಸ್ವಂತ ನಿವೇಶನವಾಗಲಿ ಮತ್ತು ಮೂಲಭೂತ ಸೌಕರ್ಯವಾಗಲಿ ಇರುವುದಿಲ್ಲ ಆದ್ದರಿಂದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಅಲೆಮಾರಿ ಜನಾಂಗದವರು ಮನವಿಯನ್ನು ಸಲ್ಲಿಸಿದರು.
Kshetra Samachara
21/12/2024 08:13 pm