ಮೊಳಕಾಲ್ಮುರು:-ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ,ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗವು ಪವಿತ್ರವಾದ ರಂಗವಾಗಿದ್ದು, ಇಂದಿಗೂ ತನ್ನ ಗೌರವ ಕಾಪಾಡಿಕೊಂಡಿದೆ.
ರಾಜಕಾರಣಿಗಳ ತಪ್ಪುಗಳನ್ನು ತಿದ್ದಿ, ಅನೇಕ ಜ್ವಲಂತ ಸಮಸ್ಯೆಗಳನ್ನು ಲೋಕದ ಗಮನಕ್ಕೆ ತಂದು ಹೊರಜಗತ್ತಿನಲ್ಲಿ ಸಂಚಲನ ಮೂಡಿಸುವುದರ ಜೊತೆಯಲ್ಲಿ ಸಮಸ್ಯೆಗೆ ನಿಜ ಪರಿಹಾರ ಕೊಡಿಸುವ ವರದಿಗಾರಿಕೆಯು ಅಮೂಲ್ಯ ಕೆಲಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವಲಿಂಗ ಸ್ವಾಮೀಜಿ, ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಮಾತನಾಡಿದರು.
ಮುಖಂಡರಾದ ಜಿ.ಪ್ರಕಾಶ್, ಸುಬಾನ್ ಸಾಬ್, ಮಾರುತಿ ಮಂಚಿ ಸೇರಿದಂತೆ ಹಲವರಿದ್ದರು.
Kshetra Samachara
21/12/2024 05:21 pm