ಪುಷ್ಪ 2 ಚಿತ್ರದ ಮೂಲಕ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಆದರೆ, ಅಲ್ಲು ಅರ್ಜುನ್ ಅವರಿಗೆ ನೆಮ್ಮದಿಯ ನಿದ್ದೆಯನ್ನು ಮಾಡಲು ಹೈದ್ರಾಬಾದ್ ಪೊಲೀಸರು ಮತ್ತು ತೆಲಂಗಾಣ ಸರ್ಕಾರ ಬಿಡುತ್ತಿಲ್ಲ, ಇದರ ಬೆನ್ನಲ್ಲೆ ಅಲ್ಲು ಅರ್ಜುನ್ ವಿರುದ್ಧ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಮಾತನಾಡಿ, ಗಂಭೀರವಾದ ಆರೋಪವನ್ನು ಕೂಡ ಮಾಡಿದ್ದಾರೆ.
ಹೌದು, ಪುಷ್ಪ 2 ಚಿತ್ರದ ಪ್ರದರ್ಶನದ ಸಮಯದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಕುರಿತು ತೆಲಂಗಾಣ ವಿಧಾನಸಭೆಯಲ್ಲಿ ಮಾತನಾಡಿರುವ ಅಕ್ಬರುದ್ದೀನ್ ಓವೈಸಿ, ಅಲ್ಲು ಅರ್ಜುನ್ ಅವರ ಹೆಸರನ್ನು ಹೇಳದೇ ವಾಗ್ದಾಳಿಯನ್ನು ಪರೋಕ್ಷವಾಗಿ ನಡೆಸಿದ್ದಾರೆ.
ನಾನು ಆ ಖ್ಯಾತ ಸ್ಟಾರ್ ನ ಹೆಸರು ತೆಗೆದುಕೊಳ್ಳಲು ಇಚ್ಚಿಸುವುದಿಲ್ಲ ಎಂದಿರುವ ಅಕ್ಬರುದ್ದೀನ್ ಓವೈಸಿ ನನಗೆ ಬಂದ ಮಾಹಿತಿಯ ಪ್ರಕಾರ, ಕಾಲ್ತುಳಿತ ಪ್ರಕರಣದ ಕುರಿತು ವಿಚಾರ ಗೊತ್ತಾದ ಮೇಲೆ ಕೂಡ ಆ ಸ್ಟಾರ್ ನೆಮ್ಮದಿಯಿಂದ ಕುಳಿತು ಚಿತ್ರವನ್ನು ನೋಡಿದ್ದಾರೆ ಎಂದಿರುವ ಅಕ್ಬರುದ್ದೀನ್ ಓವೈಸಿ ಚಿತ್ರ ಮುಗಿದ ನಂತರ ಕೂಡ ಮೃತರ ಕುಟುಂಬದ ಬಳಿ ಆ ಸ್ಟಾರ್ ತೆರಳಲಿಲ್ಲ, ಬದಲಿಗೆ ಕೈ ಬೀಸುತ್ತಾ ಚಿತ್ರಮಂದಿರದಿಂದ ಹೊರ ನಡೆದಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆ ಸಾವನ್ನಪ್ಪಿರುವ ವಿಚಾರ ಮತ್ತು ಆಕೆಯ ಮಗ ಆಸ್ಪತ್ರೆಯಲ್ಲಿ ದಾಖಲಾದ ವಿಚಾರವನ್ನು ತಿಳಿದ ನಂತರ ಕೂಡ ಯಾವುದೇ ಪ್ರಾಯಶ್ಚಿತ ಭಾವ ಇಲ್ಲದೇ ಈ ಚಿತ್ರ ಗ್ಯಾರಂಟಿ ಹಿಟ್ ಆಗುತ್ತೆ ಎಂದು ಆ ಸ್ಟಾರ್ ನಸುನಕ್ಕಿದ್ದರು ಎಂದು ಕಿಡಿಕಾರಿದ್ದಾರೆ.
PublicNext
22/12/2024 08:05 am