ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸಿ.ಟಿ ರವಿ ಹರಕು ಬಾಯಿ ಮನುಷ್ಯ' : ಪ್ರಿಯಾಂಕ್‌ ಖರ್ಗೆ ಸಿಡಿಮಿಡಿ

ಕಲಬುರಗಿ: ಸಿ.ಟಿ ರವಿ ಸದನದ ಒಳಗಿಂದ ಜೀವಂತವಾಗಿ ಬಂದದ್ದೇ ಪುಣ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಲ್ಲ. ಬದಲಿಗೆ ರವಿ ಒಬ್ಬ ಹರಕು ಬಾಯಿ ಮನುಷ್ಯ ಎಂದಷ್ಟೇ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮಜಾಯಿಷಿ ನೀಡಿದರು.

ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯ ಹೆಣ್ಣು ಮಕ್ಕಳ ಪೈಕಿ ಯಾರಿಗಾದರೂ ಆ ಪದ ಉಪಯೋಗಿಸಿದ್ದರೆ ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದ ಅವರು, ಇದನ್ನೇ ಉಲ್ಲೇಖಿಸಿ ಆತನೊಬ್ಬ ಹರಕು ಬಾಯಿ ಅಂತಷ್ಟೇ ಡಿಸಿಎಂ ಹೇಳಿದ್ದಾರೆ. ಒಬ್ಬ ಆರೋಪಿ ಸ್ಟೇಷನ್ ಒಳಗಿದ್ದರೆ ಅಲ್ಲಿ ಬಿಜೆಪಿಯವರಿಗೆ ಏನು ಕೆಲಸ? ಎಂದು ಸಹ ಪ್ರಶ್ನಿಸಿದರು.

ಸಿ.ಟಿ ರವಿ ಅವರನ್ನು ಇಡೀ ರಾತ್ರಿ ಸುತ್ತಾಡಿಸಿದ್ದು ಸರಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಟೈಟ್ ಮಾಡಿದ್ರೆ ಶಾಸಕನಿಗೆ ಹಿಂಗೆ ಮಾಡಿದ್ರು ಅಂತೀರಿ, ಫ್ರೀ ಬಿಟ್ರೆ ಐಷಾರಾಮಿ ವ್ಯವಸ್ಥೆ ಕೊಟ್ರಿ ಅಂತೀರಿ. ತಮ್ಮ ಮೊಬೈಲ್, ವಾಚು ಪೊಲೀಸರು ಕಿತ್ತುಕೊಂಡರು ಅಂತ ಸಿ.ಟಿ.ರವಿ ಹೇಳ್ತಾರೆ, ಒಬ್ಬ ಆರೋಪಿ ಸ್ಥಾನದಲ್ಲಿ ನಿಂತಾಗ ತಕ್ಷಣ ಬಾಡಿ ಸರ್ಚ್ ಆಗಬೇಕಲ್ಲವಾ? ದರ್ಶನ್ ಪ್ರಕರಣದಲ್ಲಿ ಮೊಬೈಲ್ ಮೂಲಕ ವಿಡಿಯೋ ಕರೆ ಬಂದಾಗ ನೀವೇ ಏನೆಲ್ಲಾ ಹೇಳಿದ್ದಿರಿ ಎಂದು ನೆನಪಿಸಿದರು.

Edited By : Abhishek Kamoji
PublicNext

PublicNext

22/12/2024 08:17 am

Cinque Terre

46.73 K

Cinque Terre

10

ಸಂಬಂಧಿತ ಸುದ್ದಿ