ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ವೀರ ಜುಂಜಪ್ಪ ಮತ್ತು ಶ್ರೀ ತಿಮ್ಮಪ್ಪ ಸ್ವಾಮಿಯ ಕಾರ್ತಿಕ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಗ್ರಾಮದಲ್ಲಿನ ಮಹಿಳೆಯರು ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು, ದೇವರಿಗೆ ಆರತಿಯನ್ನು ಬೆಳಗಿ ಭಕ್ತಿ ಸಮರ್ಪಿಸಿದರು.
ವಾದ್ಯಗಳ ತಾಳ ಮೇಳಕ್ಕೆ ಗ್ರಾಮಸ್ಥರು ಕೂಡ ಹೆಜ್ಜೆ ಹಾಕಿದ್ದು, ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಿ ಕಾರ್ತಿಕೋತ್ಸವವನ್ನು ಸಂಭ್ರಮಿಸಿದ್ದಾರೆ.
PublicNext
16/12/2024 10:40 pm