ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಕಣಿವೆಮಾರಮ್ಮ ದೇವಿಯ ಕಾರ್ತಿಕ ಮಹೋತ್ಸವ

ಹೊಸದುರ್ಗ: ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಗ್ರಾಮ ದೇವತೆ ಶ್ರೀ ಕಣಿವೆಮಾರಮ್ಮ ದೇವಿಯ ಕಾರ್ತಿಕ ಮಹೋತ್ಸವ ಅತ್ಯಂತ ಸಂಭ್ರಮ-ಸಡಗರದಿಂದ ನಡೆಯಿತು.

ಕಾರ್ತಿಕ ಮಹೋತ್ಸವದ ನಿಮಿತ್ತವಾಗಿ ದೇವಾಲಯವನ್ನು ಸ್ವಚ್ಛಗೊಳಿಸಿ, ತಳಿರು-ತೋರಣ, ವಿವಿಧ ಬಗೆಯ ಹೂಗಳಿಂದ ಮತ್ತು ನೂರಾರು ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಅಮ್ಮನವರಿಗೆ ಬೆಳಿಗ್ಗೆಯಿಂದಲೂ ಅಭಿಷೇಕ ಹಾಗೂ ವಿಶೇಷ ಪೂಜಾಕಾರ್ಯಗಳು ನಡೆದವು

. ರಾತ್ರಿ ನೂರಾರು ಭಕ್ತರು ದೇವಾಲಯದ ಒಳಾಂಗಣ ಮತ್ತು ಹೊರಂಗಣದಲ್ಲಿ ಇಟ್ಟಿದ್ದ ನೂರಾರು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ಮಹಿಳೆಯರು ಮತ್ತು ಮಕ್ಕಳು ದೇವಿಗೆ ಎಡೆ ನೀಡಿ, ಆರತಿ ಬೆಳಗಿದರು.ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

Edited By : PublicNext Desk
PublicNext

PublicNext

18/12/2024 04:22 pm

Cinque Terre

8.43 K

Cinque Terre

2

ಸಂಬಂಧಿತ ಸುದ್ದಿ