ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬಸವಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ, ಯತ್ನಾಳ್ ವಿರುದ್ಧ ಪ್ರತಿಭಟನೆ

ಚಿತ್ರದುರ್ಗ: ವಿಶ್ವಗುರು ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಬಸವ ಧರ್ಮ ಪೀಠದ ವತಿಯಿಂದ ನಗರದ ಬಸವ ಮಂಠಪದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತನ್ನ ಶಾಸಕ ಸ್ಥಾನದಿಂದ ವಜಾ‌ ಮಾಡುವಂತೆ ಆಗ್ರಹ ಮಾಡಿದ್ದಾರೆ.

ವಿಶ್ವಗುರು ಬಸವಣ್ಣನವರ ಲಿಂಗೈಕ್ಯ ವಿಚಾರವಾಗಿ ಇತಿಹಾಸ ಪ್ರಜ್ಞೆ ಇಲ್ಲದೇ ತುಂಬಾ ಹಗುರವಾಗಿ ಹೇಳಿಕೆ ನೀಡಿ ಅವಮಾನಿಸಿದ್ದನ್ನ ಬಸವ ಧರ್ಮ ಪೀಠ ತೀವ್ರವಾಗಿ ಖಂಡಿಸಿದ್ದು ಬಸವನಗೌಡ ಪಾಟೀಲ್ ಯತ್ನಾಳ್ ಇವರು ವಿಶ್ವಗುರು ಬಸವಣ್ಣನವರ ಲಿಂಗೈಕ್ಯ ವಿಚಾರವಾಗಿ ಇತಿಹಾಸ ಪ್ರಜ್ಞೆ ಇಲ್ಲದೆ ತುಂಬಾ ಹಗುರವಾಗಿ ಹೇಳಿಕೆ ನೀಡಿ ಹಿಂದೂ ಸಮಾಜದ ಕುರಿತು ಮಾತನಾಡಿದ್ದಾರೆ.

ಜನಪ್ರತಿನಿಧಿಯಾದ ಇವರುಗಳು ಒಂದು ಸಮಾಜದ ಪ್ರತಿನಿಧಿ ಎಂಬಂತೆ ಕೋಮುಗಲಭೆ ಸೃಷ್ಠಿ ಮಾಡುವುದಲ್ಲದೇ ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ.

ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಮನನೋಯುವಂತೆ ನಡೆದುಕೊಂಡಿದ್ದು ಈ ಕೂಡಲೇ ಇವರನ್ನ ಸಂಬಂಧಪಟ್ಟ ಆಡಳಿತ ವರ್ಗದವರು ಇವರ ಬೂಟಾಟಿಕೆಯ ಸೇವೆಯಿಂದ ನಿವೃತ್ತಿಗೊಳಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರೀಯ ಬಸವದಳ ಚಿತ್ರದುರ್ಗ ಜಿಲ್ಲಾ ಘಟಕ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.

Edited By : Ashok M
PublicNext

PublicNext

17/12/2024 03:08 pm

Cinque Terre

20.71 K

Cinque Terre

0

ಸಂಬಂಧಿತ ಸುದ್ದಿ