ಚಿತ್ರದುರ್ಗ: ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ ಶ್ರೀ ಜಯದೇವ ಮುರುಘಾ ರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತೋತ್ಸವ ಹಿನ್ನೆಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರಸಭೆ ಸದಸ್ಯರಾದ ಕೆ.ಬಿ ಸುರೇಶ್ ರವರು ಸ್ವಂತ ಖರ್ಚಿನಲ್ಲಿ ನೂತನ ಜಯದೇವ ವೃತ್ತದ ನಾಮಪಲಕವನ್ನ ನಿರ್ಮಿಸಿದ್ದಾರೆ. ಸಂಸದ ಗೋವಿಂದ ಕಾರಜೋಳ, ಎಂಎಲ್ಸಿ ಕೆ.ಎಸ್ ನವೀನ್, ಶಾಸಕ ಎಂ.ಚಂದ್ರಪ್ಪ ಹಾಗೂ ಹೆಬ್ಬಾಳ್‍ನ ವಿರಕ್ತ ಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ಆಗಮಿಸಿ ನೂತನ ವೃತ್ತವನ್ನ ಉದ್ಘಾಟನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿ ಮಾನವ ಕುಲ ಒಂದೇ ಗಂಡು ಹೆಣ್ಣು ಮಾತ್ರವೇ ಎರಡು ಜಾತಿ ಎಂಬ ಸಂದೇಶವನ್ನು ಸಮಾಜಕ್ಕೆ ಜಯದೇವ ಶ್ರೀಗಳು ನೀಡುವುದರ ಜೊತೆಯಲ್ಲಿ ಸುಂದರ ಸಮಾಜ ನಿರ್ಮಾಣಕ್ಕೆ ಕೆಲಸಕ್ಕೆ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ನಿಮ್ಮಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ, ಇಲ್ಲಿ ಜಯದೇವ ಜಗ್ಗದ್ಗುರುಗಳ ವೃತ್ತ ಎಂದು ಹೆಸರಿಟ್ಟ ಮೇಲೆ ಇದು ಸುಂದರವಾದ ವೃತ್ತವಾಗಬೇಕಿದೆ, ಕಾಟಾಚಾರಕ್ಕೆ ವೃತ್ತವಾಗಬಾರದು ಎಂದರು.
ನಗರಸಭೆಯವರು ಹಾಗೂ ಸಂಬಂಧಪಟ್ಟವರು ಎಲ್ಲಾರು ಸೇರಿ ಕಾನೂನ ಬದ್ಧವಾಗಿ ಸುಂದರವಾದ ವೃತ್ತವನ್ನಾಗಿ ಮಾಡಲು ಮುಂದಾಗಬೇಕಿದೆ ಎಂದರು.
Kshetra Samachara
22/12/2024 05:56 pm