ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಹಾಡಹಗಲೇ ಮಣ್ಣು ಲೂಟಿ ಆದ್ರೂ ಕಣ್ಮುಚ್ಚಿ ಕೊಳಿತ್ರ ಮತ್ತೋಡು ಅಧಿಕಾರಿ

ಹೊಸದುರ್ಗ : ತಾಲೂಕಿನ ಮತ್ತೊಂದು ಹೋಬಳಿಯ ಗಡಿ ಪ್ರದೇಶದಲ್ಲಿ ಅಕ್ರಮ ಮಣ್ಣುಗಾರಿಕೆ ಅವ್ಯಾಹತವಾಗಿ ಸಾಗಿದ್ದು,ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಸಹಾಯಕರಾಗಿ ಕಣ್ಮುಚ್ಚಿ ಕುಳಿತಿದ್ದಾರೆ.

ತಾಲೂಕಿನ ಮತ್ತೂಡು ಹೋಬಳಿ ವ್ಯಾಪ್ತಿಯ ಪ್ರದೇಶ ಪ್ರಾಕೃತಿಕವಾಗಿ ಸಮೃದ್ಧವಾಗಿದೆ.ಎಂತಹ ಪ್ರಾಕೃತಿಕ ಸಂಪತ್ತಿನ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು. ಅವ್ಯವಹಾರವಾಗಿ ಮಣ್ಣು ಲೂಟಿ ಮಾಡುವ ಕಾರ್ಯ ಎಗ್ಗಿಲದೇ ಸಾಗಿದೆ.

ಮತ್ತೋಡು ಹೋಬಳಿಯ ಕಿಡ್ದಾಳ್ ಹಾಗೂ ದೊಡ್ಡಬ್ಯಾಲದಕೆರೆಯ ಗಡಿ ಪ್ರದೇಶಗಳಲ್ಲಿನ ಸರ್ಕಾರಿ ಆಸ್ತಿಗಳಲ್ಲಿ,ಹುಲ್ಲು ಬನ್ನಿ ಕರಾಬು ಹಾಗೂ ಅರಣ್ಯ ಪ್ರದೇಶಗಳ ಹಂಚಿನಲ್ಲಿ ಅವ್ಯವಹಾರವಾಗಿ ಸಾಗಿಸುತ್ತಿರುವ ಮಣ್ಣು ಲೂಟಿಗೆ ದಿನಕ್ಕೆ ನೂರಾರು ಟ್ರಿಪ್ ಮಣ್ಣು ಮಾಯವಾಗುತ್ತಿದೆ.ಅಕ್ರಮ ಮಣ್ಣುಗಾರಿಕೆ ನಡೆಯುತ್ತಿರುವುದು ರಾತ್ರಿ ಸಮಯದಲ್ಲಲ್ಲ ಬದಲಾಗಿ ಹಾಡು ಹಾಕಲೇ ಎಂಬುದು ಗಮನಿಸಬೇಕಾದ ಅಂಶ.ಹಗಲಿನಲ್ಲೇ ಮಣ್ಣು ಬಗೆದು ಬಹಿರಂಗವಾಗಿ ಸಾಗಿಸಲಾಗುತ್ತಿದೆ ಎಂದರೆ ಈ ಅಕ್ರಮ ಮಣ್ಣುಗಾರಿಕೆ ಹಿಂದಿರುವ ಕಾಣದ ಕೈಗಳ ಪ್ರಭಾವ ಎಷ್ಟಿರಬಹುದು ಎಂಬುದು ತಿಳಿಯುತ್ತದೆ.ಹಾಗೂ ಅಧಿಕಾರಗಳ ಬೇಜವಾಬ್ದಾರಿತನ ಗೆದ್ದು ಕಾಣುತ್ತದೆ.

ಹೋಬಳಿಯ ಕಾನುಬೆನಹಳ್ಳಿ ಸರ್ವೇ ನಂಬರ್ 43 ರಲ್ಲಿ ದಿನಾಂಕ 10.12.2024 ರಂದು ಸಹ ಅಕ್ರಮವಾಗಿ ಮಣ್ಣು ತುಂಬಿತ್ತು ಸ್ಥಳೀಯರ ದೂರಿನ ಮೇರೆಗೆ ಕಂದಾಯ ಅಧಿಕಾರಿಗಳು ಬಂದು ಹಿಟಾಚಿ ಮತ್ತು ಒಂದು ಲಾರಿಗಿ ನೋಟಿಸ್ ನೀಡಿ ಬಿಟ್ಟು ಕಳಿಸಿದ್ದಾರೆ ಎಂಬ ಮಾಹಿತಿ ಬಂದಿದ್ದು. ಮಣ್ಣು ತುಂಬಿದ ಲಾರಿಗಳನ್ನು ಯಾಕೆ ವಶಕ್ಕೆ ಪಡೆದಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡುತ್ತಿದೆ ಎಂದು ಸ್ಥಳೀಯ ಮಾಧ್ಯಮದವರಿಗೆ ಮಾಹಿತಿ ತಿಳಿಸಿದ್ದಾರೆ.

ದೊಡ್ಡ ಬ್ಯಾಲದೆ ಕೆರೆ ಸರ್ವೇ ನಂಬರ್ 38 ಸರ್ಕಾರಿ ಹುಲ್ಲು ಬನ್ನಿ ಕರಾಬು ಹಾಗಿದ್ದು ಈ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ನೆಪದಲ್ಲಿ ಈಗಾಗಲೇ ಸಾವಿರಾರು ಲೋಡ್ ಮಣ್ಣು ಅಕ್ರಮವಾಗಿ ಲೂಟಿ ಮಾಡಿರುವ ಅವರ ವಿರುದ್ಧ ಜಿಪಿಎಸ್ ಫೋಟೋ ಸಮೇತ ಹೊಸದುರ್ಗ ತಾಲ್ಲೂಕು ಆಡಳಿತಕ್ಕೆ ದೂರು ನೀಡಿ ಒಂದು ವಾರ ಕಳೆದರೂ ಸಹ ಇಲ್ಲಿಯವರೆಗೂ ಯಾವುದೇ ಕ್ರಮ ಆಗಿಲ್ಲ.

Edited By : PublicNext Desk
Kshetra Samachara

Kshetra Samachara

21/12/2024 02:56 pm

Cinque Terre

160

Cinque Terre

0

ಸಂಬಂಧಿತ ಸುದ್ದಿ