ಪರಿಹಾರದ ಹೆಸರಿನಲ್ಲಿ ಪತ್ನಿಯರು ನಡೆಸಿಕೊಳ್ಳುತ್ತಿರುವ ರೀತಿಯ ಕೋರ್ಟ್ ಪ್ರೊಸೀಡಿಂಗ್ಸ್ ವೈರಲ್ ಆಗುತ್ತಿವೆ. ಈ ಕೇಸಿನ ವಿಡಿಯೋ ಕೂಡ ವೈರಲ್ ಆಗಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ಸ್ಪಷ್ಟವಾಗಿ ನಮೂದಾಗಿಲ್ಲ. ಹೈಫೈ, ಬ್ರಾಂಡೆಡ್ ಪತ್ನಿಯೊಬ್ಬಳು ತಿಂಗಳಿಗೆ ಆರು ಲಕ್ಷ ರೂಪಾಯಿ ಡಿಮಾಂಡ್ ಮಾಡಿ ನ್ಯಾಯಾಧೀಶೆಯಿಂದ ಉಗಿಸಿಕೊಂಡಿರುವ ಕೊರ್ಟ್ ಕೇಸ್ ಇದಾಗಿದೆ.
ಇದರಲ್ಲಿ ಪತ್ನಿಯೊಬ್ಬಳು ವಿಚ್ಛೇದಿತ ಪತಿಯಿಂದ ತಿಂಗಳಿಗೆ 6 ಲಕ್ಷದ 16 ಸಾವಿರ ರೂಪಾಯಿಗಳ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಪ್ರಶ್ನಿಸಿ ಪತಿ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯನ್ನು ನೋಡುತ್ತಲೇ ನ್ಯಾಯಾಧೀಶೆ ಕೆಂಡಾಮಂಡಲ ಆಗಿದ್ದಾರೆ. ಇಷ್ಟು ಬಜೆಟ್ನಲ್ಲಿ ಸಾಮಾನ್ಯ ಕುಟುಂಬವೊಂದು ಇಡೀ ವರ್ಷದ ಜೀವನ ಸಾಗಿಸುತ್ತಿದೆ.
ಹೀಗಿರುವಾಗ ತಿಂಗಳಿಗೆ ಒಬ್ಬಳಿಗಾಗಿ ಇಷ್ಟೊಂದು ಹಣದ ಬೇಡಿಕೆ ಇಟ್ಟಿರುವುದನ್ನು ನೋಡಿ ನ್ಯಾಯಾಧೀಶೆ ಅಚ್ಚರಿಕೊಂಡಿದ್ದಾರೆ. ಅವರ ಪರ ವಾದಿಸಲು ಬಂದಿರುವ ವಕೀಲರಿಗೆ ಸರಿಯಾದ ಬುದ್ಧಿ ಮಾತನ್ನು ಹೇಳಿರುವ ನ್ಯಾಯಾಧೀಶೆ, ದುರಾಸೆಯ ಪತ್ನಿಯ ವಿರುದ್ಧ ಮಾತಿನ ಏಟು ನೀಡಿದ್ದಾರೆ. '
ಒಬ್ಬಳಿಗೆ ತಿಂಗಳಿಗೆ ಇಷ್ಟೊಂದು ದುಡ್ಡು ಬೇಕಾ? ಇದೇನು ಆಟನಾ' ಎಂದು ಪ್ರಶ್ನಿಸಿರೋ ನ್ಯಾಯಾಧೀಶೆ, 'ಇಷ್ಟೊಂದು ಆಕೆಗೆ ಬೇಕಿದ್ದರೆ ದುಡಿಯಲು ಹೇಳಿ' ಎಂದು ಪತ್ನಿಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಕುಟುಂಬದ ಯಾವುದೇ ಜವಾಬ್ದಾರಿ ಇಲ್ಲ, ಮಕ್ಕಳನ್ನು ನೋಡಿಕೊಳ್ಳುವ ಪ್ರಶ್ನೆಯೂ ಇಲ್ಲ. ಒಬ್ಬಳ ಸಲುವಾಗಿ ಇಷ್ಟೊಂದು ಹಣ ಬೇಕಾ? ಬುದ್ಧಿ ಇಲ್ವಾ' ಎಂದು ಗರಂ ಆಗಿದ್ದಾರೆ ನ್ಯಾಯಾಧೀಶೆ. ಕಾನೂನು ಇರೋದು ಹೀಗೆಲ್ಲಾ ಡಿಮಾಂಡ್ ಮಾಡಿ ಪತಿಗೆ ಶಿಕ್ಷೆ ಕೊಡಲು ಅಲ್ಲ ಎಂದು ಹೇಳಿದ್ದಾರೆ.
ಕೆಳ ಹಂತದ ಕೋರ್ಟ್ ಇಷ್ಟು ಹಣವನ್ನು ನೀಡುವಂತೆ ಆದೇಶ ಮಾಡಿದೆ ಎಂದು ವಕೀಲರು ಹೇಳುತ್ತಿದ್ದಂತೆಯೇ, ಅದೆಲ್ಲಾ ನಮಗೆ ಬೇಡ, ಇಷ್ಟು ಹಣ ಪತ್ನಿಗೆ ಯಾಕೆ ಬೇಕು ಹೇಳಿ ಎಂದಾಗ, ವಕೀಲರು, ಪತ್ನಿಯ ಹೈಫೈ ಲೈಫ್ಸ್ಟೈಲ್ ಹೇಳಿದ್ದಾರೆ.
PublicNext
22/12/2024 11:36 am