ಡೆಹ್ರಾಡೂನ್: ಪ್ರಿಯತಮೆಗಾಗಿ ಹುಡುಗರು ಕಿತ್ತಾಡಿಕೊಂಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದ್ರೆ ಪ್ರಿಯತಮನಿಗಾಗಿ ಇಬ್ಬರು ಹುಡುಗಿಯರು ಹೊಡೆದಾಕೊಂಡ ಬಗ್ಗೆ ವರದಿಯಾಗಿದೆ.
ಉತ್ತರಾಖಂಡ್‌ನ ಡೆಹ್ರಾಡೂನ್ ನಗರದಲ್ಲಿ ಈ ಘಟನೆ ನಡೆದಿದೆ. ಬಾಯ್‌ಫ್ರೆಂಡ್ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರೂ ಯುವತಿಯರು ನಾನಾ? ನೀನಾ? ಎಂಬತೆ ಕೈ ಕೈ ಮಿಲಾಯಿಸಿದ್ದಾರೆ. ರೋಷಾವೇಶದಿಂದ ಹೊಡೆದಾಡಿಕೊಂಡಿದ್ದಾರೆ. ಕೆಲ ಹೊತ್ತಿನಲ್ಲಿ ಅಲ್ಲಿ ಸೇರಿದ ಜನ ಇವರಿಬ್ಬರ ಹೊಡೆದಾಟ ನೋಡುತ್ತ ಸುಮ್ಮನೆ ನಿಂತಿದ್ದಾರೆ. ಬಳಿಕ ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದಾರೆ.
PublicNext
22/12/2024 08:15 pm