ನವದೆಹಲಿ: ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹೃದಯಸ್ಪರ್ಶಿ ವಿನಿಮಯದಲ್ಲಿ ಬಾಲಕಿಯ ಬೌಲಿಂಗ್ ಆಕ್ಷನ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಹಳ್ಳಿ ಬಾಲಕಿಯೊಬ್ಬಳು ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ಮಾತ್ರವಲ್ಲದೆ ಜಹೀರ್ ಖಾನ್ ಅವರಿಗೂ ಟ್ಯಾಗ್ ಮಾಡಿ, 'ನೀವಿದನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಈಕೆಯ ಬೌಲಿಂಗ್ ಶೈಲಿ ನೋಡಲು ಎಷ್ಟೊಂದು ನಾಜೂಕು, ನಿರಾಯಾಸ ಮತ್ತು ಆಕರ್ಷಣೀಯವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಹೀರ್ ಖಾನ್ ಅವರು, ನೀವಿದನ್ನು ನೋಡಿ ಒಪ್ಪಿಕೊಂಡಿದ್ದೀರಿ ಎಂದು ಹೇಳಿದ ಮೇಲೆ ನಾನೇನೂ ಹೇಳಲಿಲ್ಲ. ಈಕೆಯ ಆ್ಯಕ್ಷನ್ ಬಹಳ ನಾಜೂಕು ಮತ್ತು ಆಕರ್ಷಣೀಯವಾಗಿದೆ. ಈಗಾಗಲೇ ಈಕೆ ದೊಡ್ಡ ಭರವಸೆ ಹುಟ್ಟಿಸಿದ್ದಾಳೆ.’’ ಎಂದು ಆಶಾವಾದದ ಮಾತುಗಳನ್ನು ಆಡಿದ್ದಾರೆ.
ಸುಶೀಲಾ ಮೀನಾ ಅವರು ರಾಜಸ್ಥಾನದ ಪ್ರತಾಪಗಢದವರು. ಎಡಗೈ ವೇಗದ ಬೌಲರ್ ಆಗಿರುವ ಆಕೆಯ ಬೌಲಿಂಗ್‌ನ ಹೆಚ್ಚಿನ ವಿಡಿಯೋಗಳು ಮತ್ತು ಇತರ ಶಾಲಾ ಮಕ್ಕಳು ಕ್ರಿಕೆಟ್ ಆಡುವ ವಿಡಿಯೋಗಳನ್ನು @aamliya_ishwar Instagram ಖಾತೆಯಲ್ಲಿ ನೋಡಬಹುದಾಗಿದೆ. ಬಾಲಕಿ ಕ್ರಿಕೆಟ್ ಮೈದಾನವೊದಲ್ಲಿ ಶಾಲಾ ಯೂನಿಫಾರ್ಮ್ ನಲ್ಲೇ ಆಟವಾಡುತ್ತಿರುವಾಗ ತೆಗೆದಿರುವ ಈ ವಿಡಿಯೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ.
PublicNext
21/12/2024 09:43 am