ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : 'ನನ್ನನ್ನು ಕೇಳದೆ ನನ್ನ ಮಕ್ಕಳ ವಿಡಿಯೋ ಚಿತ್ರಿಕರಿಸುವಂತಿಲ್ಲ' : ಮೆಲ್ಬೋರ್ನ್​ನಲ್ಲಿ ಪತ್ರಕರ್ತೆಯೊಂದಿಗೆ 'ವಿರಾಟ್' ವಾಗ್ವಾದ

ಬ್ರಿಸ್​ಬೇನ್​: ಬ್ರಿಸ್ಬೇನ್ ಟೆಸ್ಟ್ ಪಂದ್ಯ ಡ್ರಾ ಆದ ನಂತರ ಭಾರತ ತಂಡ ನಾಲ್ಕನೇ ಪಂದ್ಯಕ್ಕಾಗಿ ಮೆಲ್ಬೋರ್ನ್ ತಲುಪಿದೆ. ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಪ್ರಯತ್ನಿಸಲಿವೆ.

ಇದಕ್ಕೂ ಮುನ್ನ ಮೆಲ್ಬೋರ್ನ್ ಏರಪೋರ್ಟ್‌ನಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ಮಾಧ್ಯಮಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೊಹ್ಲಿ ಮತ್ತು ಅವರ ಕುಟುಂಬ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ನೋಡಿ ಅವರತ್ತ ಕ್ಯಾಮೆರಾ ತಿರುಗಿಸಿದರು, ಇದರಿಂದ ಕೊಹ್ಲಿ ಕೋಪಗೊಂಡರು. ಇದರಿಂದ ಕೋಪಗೊಂಡ ವಿರಾಟ್‌, ನನ್ನನ್ನು ಕೇಳದೆ ನನ್ನ ಮಕ್ಕಳ ಫೋಟೋ ಮತ್ತು ವಿಡಿಯೋ ಸೆರೆಹಿಡಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Edited By : Abhishek Kamoji
PublicNext

PublicNext

20/12/2024 09:00 am

Cinque Terre

39.5 K

Cinque Terre

1

ಸಂಬಂಧಿತ ಸುದ್ದಿ