ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಪಟ್ಟಣದ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡುವಂತೆ ಒತ್ತಾಯ

ಮೊಳಕಾಲ್ಮುರು: ನಾಯಕನಹಟ್ಟಿ ಪಟ್ಟಣದ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡುವಂತೆ ಪಪಂ ಮುಖ್ಯಾಧಿಕಾರಿ ಶ್ರೀನಿವಾಸ್ ಗೆ ಮನವಿ ಪತ್ರ ನೀಡಲಾಯಿತು.

ಪಪಂ ವ್ಯಾಪ್ತಿಯ 14ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರು 35 ರಿಂದ 40 ವರ್ಷಗಳಿಂದ ಖಾಸಗಿ ಜಮೀನಿನಲ್ಲಿ ಗುಡಾರ ಮತ್ತು ಬಟ್ಟೆ ಟೆಂಟುಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ,ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ಸ್ವಂತ ನಿವೇಶನವಾಗಲಿ ಮತ್ತು ಮೂಲಭೂತ ಸೌಕರ್ಯವಾಗಲಿ ಇರುವುದಿಲ್ಲ,ಆದ್ದರಿಂದ ಪಪಂನಿಂದ ಬರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಅಲೆಮಾರಿ ಜನಾಂಗದವರು ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ, ಮುಖ್ಯ ಅಧಿಕಾರಿ ಓ. ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಶ್,ಅಲೇಮಾರಿ ಜನಾಂಗದವರಾದ ಮಹಾಂತಮ್ಮ,ಪಾಂಡುರಂಗ,ರಂಗಮ್ಮ ಮಾರಪ್ಪ ಸೇರಿದಂತೆ ಹಲವರಿದ್ದರು.

Edited By : PublicNext Desk
Kshetra Samachara

Kshetra Samachara

21/12/2024 02:50 pm

Cinque Terre

760

Cinque Terre

0

ಸಂಬಂಧಿತ ಸುದ್ದಿ