ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಕಂಚಿಪುರ ಕೆರೆ ಸ್ವಚ್ಛಗೊಳಿಸಿದ ಧರ್ಮಸ್ಥಳ ಅಭಿವೃದ್ಧಿ ಸಂಘ

ಹೊಸದುರ್ಗ: ಮಹಿಳಾ ಜಾಗೃತಿ, ಮಧ್ಯವರ್ಜನ ಶಿಬಿರ, ಕೆರೆ ಅಭಿವೃದ್ಧಿಯಂತಹ ಕೆಲಸಗಳು ಮತ್ತು ಮಹಿಳೆಯ ಸರ್ವಾಂಗಿನ ಅಭಿವೃದ್ಧಿಯ ಬಗ್ಗೆ ವಿಚಾರಮಂತನ ಮೂಡಿಸುವ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಅನಾಥರುದ್ದ ಮಹಿಳೆಯರಿಗಾಗಿ ವಾತ್ಸಲ್ಯ ಗೃಹ ನಿರ್ಮಾಣವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾಜಿ ಜಿ ಪಂ,ಸದಸ್ಯ ಡಿ ಪರುಶುರಾಮಪ್ಪ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಇವರಿಂದ ಕಂಚಿಪುರದಲ್ಲಿ ನಡೆದ ಸಾಮೂಹಿಕ ಶ್ರೀ ಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಭಿವೃದ್ಧಿ ಪಡಿಸಿದ ಕೆರೆಯನ್ನು ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮಸ್ಥರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸಾರ್ವಜನಿಕರು ಕೆರೆಗೆ ಕಸಕಡ್ಡಿ ಹಾಕಬಾರದು, ಧರ್ಮಸ್ಥಳ ಸಂಸ್ಥೆಯ ವತಿಯಿಂದ ಮಧ್ಯವರ್ಜನ ಶಿಬಿರಗಳನ್ನು ನಡೆಸಿ ಮಧ್ಯ ಹಾಗೂ ಮಾದಕ ವಸ್ತುಗಳ ಹೆಸರನ್ನು ಮುಕ್ತ ಸಮಾಜಕ್ಕಾಗಿ ಧರ್ಮಸ್ಥಳ ಸಂಸ್ಥೆ ಸೇವೆ ಮಾಡುತ್ತಿದೆ. ನಮ್ಮ ಊರಿನಲ್ಲಿ ಮಧ್ಯವಧ್ಯನ ಶಿಬಿರ ಮಾಡಬೇಕು ಎಂದು ಮನವಿ ಮಾಡಿದರು.

ಜಿ ಪಂ, ಕೆ ಡಿ ಪಿ ಸದಸ್ಯೆ ದೀಪಿಕಾ ಸತೀಶ್ ಮಾತನಾಡಿ ಸಾರ್ವಜನಿಕರಿಗೆ,ಪಶು ಪಕ್ಷಿ ಪ್ರಾಣಿಗಳಿಗೆ ಮೂಲಭೂತ ಅವಶ್ಯಕತೆ ಬಹು ಮುಖ್ಯ, ಕುಡಿಯುವ ನೀರು, ಬದುಕಿಗೊಂದು ಮನೆ ಇಂತಹ ಅವಶ್ಯಕತೆಗಳನ್ನು ಧರ್ಮಸ್ಥಳ ಸಂಸ್ಥೆ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಜನಸಾಮಾನ್ಯರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಕೇವಲ ಅಡುಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಯರಿಗೆ ಧರ್ಮಸ್ಥಳ ಸಂಸ್ಥೆ ಸ್ವಾವಲಂಬಿ ಜೀವನ ಕಲಿಸಿ ಮಹಿಳೆಯರ ಸಬಲೀಕರಣಕ್ಕೆ ಆಸರೆಯಾಗಿದೆ ಎಂದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬೋರೇಶ್,ತುಂಬಿನಕೆರೆ ಬಸವರಾಜ್, ತಿಪ್ಪೇಶ್, ಶಶಿಧರ್, ರಾಜಣ್ಣ, ಸುರೇಶ್, ಜಿಲ್ಲಾ ಕೆಡಿಪಿ ಸದಸ್ಯೆ ದೀಪಿಕಾ ಸತೀಶ್. ಯೋಜನಾಧಿಕಾರಿ ಶಿವಣ್ಣ, ಗ್ರಾ ಪಂ ಉಪಾಧ್ಯಕ್ಷ ಪರಮೇಶ್ವರಪ್ಪ, ಸದಸ್ಯರಾದ ಈಶ್ವರಪ್ಪ, ಗುರುಮೂರ್ತಿ,ಗುಡಿ ಗೌಡ ಬಸವರಾಜ್, ವಕ್ಕೂಟದ ಅದ್ಯಕ್ಷರುಗಳಾದ ಮಂಜುಳ, ಸಿದ್ದರಾಮಣ್ಣ ರಾಜೇಶ್ವರಿ ಮಂಜುಳ, ಮಂಜುನಾಥ್, ಮಂಜುಳ ವೈಕುಂಠ್, ಹಾಗೂ ಧರ್ಮಸ್ಥಳ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

22/12/2024 04:14 pm

Cinque Terre

360

Cinque Terre

0

ಸಂಬಂಧಿತ ಸುದ್ದಿ