ಹೊಸದುರ್ಗ: ಯಾವ ಮನೆಯಿಂದ ಅಥವಾ ಊರಿನಿಂದ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಕಲಿಯುತ್ತಾರೋ ಅವರು ಎಂದಿಗೂ ಸಮಾಜಘಾತುಕ ಕೆಲಸಗಳನ್ನು ಮಾಡುವುದಿಲ್ಲ ಪ್ರತಿ ಗ್ರಾಮಗಳಲ್ಲಿ ಮಕ್ಕಳು ಮಕ್ಕಳು ಸಂಸ್ಕಾರಯುತ ಬದುಕು ಕಟ್ಟಿಕೊಳ್ಳಲು ಪೋಷಕರು ಶ್ರಮಿಸಬೇಕು ಊರಿನ ಯಾವುದೇ ಪೂಜೆ ಹಬ್ಬ ಹರಿದಿನ ಇದ್ದಾಗ ಸ್ಥಳೀಯ ಮಕ್ಕಳನ್ನು, ಸೇರಿಸಿಕೊಂಡು ದೇವರು ಮತ್ತು ಧರ್ಮದ ಬಗ್ಗೆ ಅರಿವು ಮೂಡಿಸಬೇಕು ಎಂದು ಶ್ರೀ ಕ್ಷೇತ್ರ ಆದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹೊಸದುರ್ಗ ಯೋಜನಾಧಿಕಾರಿ ಎಸ್ ಶಿವಣ್ಣ ಸಲಹೆ ನೀಡಿದರು.
ತಾಲ್ಲೂಕಿನ ಕಲ್ಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಡಿ.ಡಿ. ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಾಲೂಕಿನ ದೇವಸ್ಥಾನಗಳ ಕೋಟ್ಯಾಂತರ ರೂ ಹಣವನ್ನು ನೀಡಿದ್ದು .ಕಾರೇಹಳ್ಳಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ 1,5 ಲಕ್ಷ ಮತ್ತು ಮತ್ತೂರು ಹರಿಹರೇಶ್ವರ ದೇವಸ್ಥಾನಕ್ಕೆ 1.5. ಲಕ್ಷ ಒಟ್ಟು 3 ಲಕ್ಷ ಡಿ.ಡಿ.ಯನ್ನು ಆ ಗ್ರಾಮಗಳಿಗೆ ತೆರಳಿ ವಿತರಣೆ ಮಾಡಿ ಮಾತನಾಡಿದರು.
ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಬಸವರಾಜ್ ಕಾರೇಹಳ್ಳಿ ಇವರು ಮಾತನಾಡಿ ಗಾಂಧೀಜಿಯವರ ಆಶಯ ಒಂದು ಊರಿನಲ್ಲಿ ಒಂದು ಶಾಲೆ,ಒಂದು ಸಹಕಾರ ಸಂಘ,ಒಂದು ಗ್ರಾಮ ಪಂಚಾಯಿತಿ ಇರಬೇಕು ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನನಸು ಮಾಡುತ್ತಿದೆ. ಇವರು ಮಾಡುವ ಒಳ್ಳೆಯ ಕೆಲಸಗಳು ಸಮಾಜಕ್ಕೆ ಮಾದರಿ ಎಂದು ತಿಳಸಿದರು.
ಈ ಕಾರ್ಯಕ್ರದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರು ಬೋರೇಶ್,,ಶಿಲ್ಪಾ, ರಾಜೇಂದ್ರ ಪ್ರಸಾದ್ ಯುವ ಮುಖಂಡರು ಲಂಬಾಣಿಹಟ್ಟಿ, ಶಿಲ್ಪಾ, ಲತಾ, ಭವ್ಯ, ಶೋಭಾ ಹಾಜರಿದ್ದರು.
Kshetra Samachara
19/12/2024 11:59 am