ಚಿತ್ರದುರ್ಗ: ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಅನ್ವರ್ ಬಾಷಾ ವಿರುದ್ಧ ವಕ್ಫ್ ಆಸ್ತಿ ಒತ್ತುವರಿ ಮಾಡಿರುವ ಗಂಭೀರ ಆರೋಪ ಪ್ರಕರಣ ಕೇಳಿ ಬಂದಿತ್ತು. ಈ ನಡುವೆ ಆರೋಪ ಹೊತ್ತ ಕೆ. ಅನ್ವರ್ ಬಾಷಾ ಕೆಲ ಮುಸ್ಲಿಂ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಮುಸ್ಲಿಂ ಹಾಸ್ಟೆಲ್ ನಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ. ತನ್ನ ವಿರುದ್ಧ ಹೋರಾಟ ಮಾಡುವ ವ್ಯಕ್ತಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಮುಸ್ಲಿಂ ಹೋರಾಟಗಾರರ ವಿರುದ್ಧ ಅನ್ವರ್ ಬಾಷಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಕುರಿತ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ವಿರುದ್ಧ ಆರೋಪ ಮಾಡಿದವರಿಗೆ ಕೌಂಟರ್ ಕೊಡಬೇಡಿ. ಆರೋಪ ಮಾಡಿದವರ ಡ್ರೆಸ್ ನೋಡಿದ್ರೆ ಅವರ ಕೆಪಾಸಿಟಿ ಗೊತ್ತಾಗುತ್ತೆ. ನೀವ್ಯಾಕೆ ಕೌಂಟರ್ ಕೊಡ್ತೀರಿ ಎಂದು ಅನ್ವರ್ ಬಾಷಾ ಗರಂ ಆಗಿದ್ದಾರೆ.
ವೀಡಿಯೋ ವೈರಲ್ ಬಳಿಕ ಅನ್ವರ್ ಬಾಷಾ ವಿರುದ್ಧ ಮುಸ್ಲಿಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ವಿರೋಧಿಗಳ ಉಡುಪು, ನಾಲಾಯಕ್ ಎಂದಿರುವ ಬಗ್ಗೆ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ವರ್ ಬಾಷಾ ವಿರುದ್ಧ ಸಿಟ್ಟಿಗೆದ್ದ ಮತ್ತೊಂದು ವಿರೋಧಿ ಗುಂಪು, ಅವಹೇಳನಕಾರಿ ಹೇಳಿಕೆ ಕುರಿತು ದೂರು ನೀಡಿದ್ದಾರೆ. ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಅನ್ವರ್ ಬಾಷಾ ವಿರುದ್ದ ದೂರು ನೀಡಿದ್ದು, ಸಮುದಾಯದ ಅಶಾಂತಿ, ಕಲಹ ಪ್ರಚೋದನೆ, ಆರೋಪ, ನ್ಯಾಯಕ್ಕಾಗಿ ಆಗ್ರಹಿಸಿ ಮುಸ್ಲಿಂ ಮುಖಂಡರು ದೂರು ನೀಡಿದ್ದಾರೆ.
Kshetra Samachara
17/12/2024 01:28 pm