ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ನಾಗಪ್ಪನಹಳ್ಳಿ ಗೇಟ್ ಬಳಿ ವ್ಯಕ್ತಿಯ ಮರ್ಡರ್ ಕೇಸ್ - ನಾಲ್ವರು ಆರೋಪಿಗಳ ಬಂಧನ

ಚಿತ್ರದುರ್ಗ- ಚಳ್ಳಕೆರೆ ತಾಲೂಕಿನ‌ ನಾಗಪ್ಪನ ಗೇಟ್ ಬಳಿ ವ್ಯಕ್ತಿಯ ಬರ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪರಶುರಾಮಪುರ ಪೊಲೀಸರು ಸಕ್ಸಸ್ ಆಗಿದ್ದಾರೆ. ಕೃತ್ಯ ಗೈದಿದ್ದ ನಾಲ್ವರು ಆರೋಪಿಗಳನ್ನು ಪರಶುರಾಂಪುರ ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ನಡೆದ 24 ಗಂಟೆಗಳಲ್ಲಿ ನಾಲ್ವರೂ ಆರೋಪಿಗಳ ಬಂಧಿಸುವಲ್ಲು ಯಶಸ್ವಿಯಾಗಿದ್ದಾರೆ. A1 ಆರೋಪಿ ರಾಮಣ್ಣ(30), A2 ಆರೋಪಿ ಕೊಟ್ರೇಶ್(25), A3 ಆರೋಪಿ ಬಸವರಾಜ್(25), A4 ಆರೋಪಿ ಸುಧಮ್ಮ(43) ಬಂಧಿತ ಆರೋಪಿಗಳು. ಎಲ್ಲರೂ ಆಂಧ್ರಪ್ರದೇಶದ ಅನಂತಪೂರ ಜಿಲ್ಲೆಯ ಮಲೈನೂರು ಗ್ರಾಮದವರು ಎಂದು ತಿಳಿದು ಬಂದಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಚ್ಚು, ಬೈಕ್, ಹಾಗೂ ಮೃತ ಗಿತ್ತರಾಜು ಮೊಬೈಲ್‌ ಫೋನ್ ವಶಕ್ಕೆ ಪಡೆಯಲಾಗಿದೆ.

ನಾಗಪ್ಪನಹಳ್ಳಿ ಗೇಟ್ ಬಳಿಯ ಹಳೆ ಬಸ್ ನಿಲ್ದಾಣದ ಹಿಂಭಾಗ ಗಿತ್ತರಾಜು(28)ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆಂಧ್ರಪ್ರದೇಶದ ವಡ್ಡೇಪಾಳ್ಯಂ ಗ್ರಾಮದ ನಿವಾಸಿ ಗಿತ್ತರಾಜು ಎಂದು ಯುವಕನನ್ನ ಕೊಲೆ ಮಾಡಲಾಗಿತ್ತು. ಅನೈತಿಕ ಸಂಬಂಧ ಹಿನ್ನೆಲೆ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. CPI ಹನುಮಂತಪ್ಪ, PSI ಬಸವರಾಜ್, ಮಾರುತಿ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

22/12/2024 03:55 pm

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ