ಚಳ್ಳಕೆರೆ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಸಾಗರ ಕೆರೆಯಲ್ಲಿ ನಡೆದಿದೆ.
41 ವರ್ಷದ ಶಿವರಾಜ್ ಎಂಬಾತ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ರಾಮಸಾಗರ ಪಕ್ಕದ ಓಬಯ್ಯನಹಟ್ಟಿ ನಿವಾಸಿ ಎಂದು ಕೂಡಾ ತಿಳಿದು ಬಂದಿದೆ. ಕೆರೆಯ ಸಮೀಪದಲ್ಲಿ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು, ಶಿವರಾಜ್ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
Kshetra Samachara
22/12/2024 03:38 pm