ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು : ರಸ್ತೆಗಾಗಿ ಮುಖ್ಯಮಂತ್ರಿ ಭೇಟಿ ಮಾಡಲು ತೀರ್ಮಾನಿಸಿದ ಡಾಗ್ ಸರ್ಕಲ್ ನಿವಾಸಿಗಳು

ಹಿರಿಯೂರು : ಬೆಳಗಾವಿ ಅಧಿವೇಶನದ ಬಳಿಕ ಡಾಗ್ ಸರ್ಕಲ್ ದಾರಿ ಸಮಸ್ಯೆ ಇತ್ಯರ್ಥಕ್ಕೆ ಮುಖ್ಯಮಂತ್ರಿ ಭೇಟಿ ಮಾಡಲು ತೀರ್ಮಾನಿಸಲಾಗಿದೆ ಎಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ತಿಳಿಸಿದ್ದಾರೆ.

ಡಿಸೆಂಬರ್ 22 ರಂದು ಹಿರಿಯೂರು ಟೌನ್ 3 ನೇ ವಾರ್ಡ್ ಚಂದ್ರಾ ಲೇ ಔಟ್ ನಲ್ಲಿ ದಾರಿ ಸಮಸ್ಯೆ ಕುರಿತು ತುರ್ತು ಸಭೆ ನಡೆಸಿದ ಡಾಗ್ ಸರ್ಕಲ್ ನಿವಾಸಿಗಳು ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶ,ಜಿಲ್ಲಾ ಉಸ್ತುವಾರಿ ಸಚಿವರ ಪತ್ರ,ಲೋಕೋಪಯೋಗಿ ಸಚಿವರ ಪತ್ರ,ಮುಖ್ಯಮಂತ್ರಿಗಳ ಪತ್ರಕ್ಕೂ ಜಗ್ಗದ ಅಧಿಕಾರಿಗಳು ಐ ಪಿ ಜಿ ಆರ್ ಎಸ್ ನಲ್ಲಿ ಸಲ್ಲಿಸಿದ ದೂರುಗಳನ್ನು ಪದೇ ಪದೇ ಅದೇ ಸುಳ್ಳು ವರದಿ ಅಪ್ಲೋಡ್ ಮಾಡಿ ಕಂಪ್ಲೆಂಟ್ ಮುಕ್ತಾಯ ಮಾಡಿರುತ್ತಾರೆ.

ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ರ ಮದ್ಯದಲ್ಲಿರುವ ದಾರಿಗೆ ಹೊಂದಿಕೊಂಡ 7 ನಗರ ಯೋಜನೆ ಅನುಮೋದಿತ ಬಡಾವಣೆ ನಕ್ಷೆಗಳಿದ್ದು. ನಿಖರವಾದ ಅಳತೆ ಮಾಡಿ ಒತ್ತುವರಿ ತೆರವು ಮಾಡಿಸಿ ರಸ್ತೆ ಮಾಡಿಕೊಡಲು ನಗರಸಭೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಡಾಗ್ ಸರ್ಕಲ್ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ.

ಈ ಭಾಗದಲ್ಲಿ ಅಹಿಂದ ಕುಟುಂಬದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು,ಮಳೆಗಾಲಕ್ಕೆ ಕೆಸರುಗದ್ದೆ ರಸ್ತೆ,ಬೇಸಿಗೆಯಲ್ಲಿ ತಗ್ಗು ಗುಂಡಿ ರಸ್ತೆ,ಕಲ್ಲು ಮುಳ್ಳು ಹಾವು ಚೇಳು ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ಓಡಾಡಬೇಕಾಗಿದೆ. ಮೂಲಭೂತ ಸೌಕರ್ಯ ವಂಚಿತ ನಮ್ಮ ದಾರಿ ಹೋರಾಟ ಇಲ್ಲಿನ ಯಾವುದೇ ಬಡಾವಣೆ ಮಾಲೀಕರ ಪರವೂ ಅಲ್ಲ,ವಿರುದ್ಧವೂ ಅಲ್ಲ, ಮಾನವೀಯ ನೆಲೆಗಟ್ಟಿನಲ್ಲಿ ಗೌರವಯುತವಾಗಿ ಬದುಕುವ ಕಾನೂನುಬದ್ದ ರಸ್ತೆ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಒಂದು ಬಡಾವಣೆ ರಸ್ತೆಗಾಗಿ ರಾಜ್ಯದ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಅವರ ಪತ್ರಕ್ಕೆ ಬೆಲೆ ಕೊಡದೆ ಸತಾಯಿಸುತ್ತಿರುವ ಹಿರಿಯೂರು ನಗರಸಭೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ದೂರು ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ಎಸ್ ವಿ ರಂಗನಾಥ್ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

22/12/2024 12:17 pm

Cinque Terre

520

Cinque Terre

0

ಸಂಬಂಧಿತ ಸುದ್ದಿ