ಚಳ್ಳಕೆರೆ: ಮಳೆ ನೀರು ವ್ಯರ್ಥವಾಗದೆ ತಡೆಯಲು ಸರಕಾರ ಕೋಟಿ ಕೋಟಿ ಹಣದಲ್ಲಿ ಗೋಕಟ್ಟೆ, ಚೆಕ್ ಡ್ಯಾಂ, ಕೆರೆ ಕೃಷಿ, ಹೊಂಡ ನಿರ್ಮಾಣ ಮಾಡಿದರೆ ಇತ್ತ ಸದಸ್ಯರೊಬ್ಬರು ಜೆಸಿಬಿ ಯಂತ್ರದಿಂದ ಗೋಕಟ್ಟೆ ಕಿತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮಪಂಚಾಯತ್ ವ್ಯಾಪ್ತಿಯ ವಡೇರಹಳ್ಳಿ ಹಾಗೂ ಬೊಂಬೆರಹಳ್ಳಿ ಮಧ್ಯೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಿದ್ದರು. ಕಳೆದು ಮೂರು ತಿಂಗಳಿಂದೆ ಸುರಿದ ಅಕಾಲಿಕ ಮಳೆಗೆ ಗೋಕಟ್ಟೆ ತುಂಬಾ ನೀರು ತುಂಬಿ ಮಿನಿ ಕೆರೆಯಂತೆ ಕಾಣುತ್ತಿತ್ತು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಹಾಗೂ ಅಂತರ್ಜಲ ವೃದ್ಧಿಗೆ ವರದಾನವಾಗಿದ್ದ ನೀರು ತುಂಬಿದ ಗೋಲಟ್ಟೆಯನ್ನು ಗ್ರಾ ಪಂ ಸದಸ್ಯರೊಬ್ಬರು ಅಭಿವೃದ್ಧಿ ಹೆಸರಿನಲ್ಲಿ ಜೆಸಿಬಿ ಯಂತ್ರದಿಂದ ಗೋಕಟ್ಟೆಯನ್ನು ಕಿತ್ತಿರುವುದರಿಂದ ಗೋಕಟ್ಟೆಯಲ್ಲಿ ಸಂಗ್ರಹವಾಗಿದ್ದ ನೀರು ಪೋಲಾಗುತ್ತಿರುವ ದೃಶ್ಯ ಕಂಡ ಗ್ರಾಮಸ್ಥರು ಅಕ್ರೋಶ ಹೊರಹಾಕಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ನೀರು ಸಂಗ್ರಹಣೆಗೆ ಕೃಣಿ ಹೊಂಡ. ಕೆರೆ ಕಾಲುವೆ ಹೂಳೆತ್ತುವುದು. ಗೋಕಟ್ಟೆ ನಿರ್ಮಾಣ ಮಾಡಿದರೆ ಇತ್ತ ಸದಸ್ಯರೊಬ್ಬರು ನೀರು ತುಂಬಿದ್ದ ಗೋಕಟ್ಟೆನ್ನು ಹೊಡೆದು ನೀರು ಪೋಲು ಮಾಡಿದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
22/12/2024 05:51 pm