ಚಿತ್ರದುರ್ಗ : ತಾಲ್ಲೂಕಿನ ಭರಮಸಾಗರದಲ್ಲಿ ಫೆ.4ರಿಂದ 9 ದಿನ ಅದ್ದೂರಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಲು ಭರದ ಸಿದ್ಧತೆಗಳು ಆರಂಭಗೊಂಡಿವೆ.
ಸಿರಿಗೆರೆಯ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ಮುಖಂಡರು ಭಾಗಿಯಾಗಿದ್ದರು, 2024 ರಲ್ಲಿಯೇ ಭರಮಸಾಗರ ದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿತ್ತು. ಆಗ ಬರ ಆವರಿಸಿ ಕೊಂಡಿದ್ದರಿಂದ ಮುಂದೂಡಲಾಗಿತ್ತು. ಈಗ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ಕಾಲ ಒದಗಿಬಂದಿದೆ ಎಂದು ಸಾನ್ನಿಧ್ಯ ವಹಿಸಿದ್ದ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತರಳಬಾಳು ಹುಣ್ಣಿಮೆ ಸಂಘರ್ಷಗಳ ಮಹೋತ್ಸವವಲ್ಲ. ಇದು ಸಮನ್ವತೆಯ ಸಂದೇಶ ಸಾರುವ ಉತ್ಸವ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಆಚರಿಸಬೇಕು. ಇದು ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದು ಸಲಹೆ ನೀಡಿದರು.
ಹುಣ್ಣಿಮೆ ಆಚರಣೆಯಲ್ಲಿ ಎಲ್ಲಾ ಸಮುದಾಯಗಳ ಭಕ್ತರೂ ಸೇರಬೇಕು. ಭರಮಸಾಗರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸಮಿತಿ ರಚಿಸಿ ಅವರನ್ನು ತೊಡಗಿಸಿಕೊಳ್ಳಬೇಕು ಎಂಬುದು ಅಪೇಕ್ಷೆಯಾಗಿದೆ ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ, ಶಾಸಕರಾದ ಎಂ. ಚಂದ್ರಪ್ಪ, ಬಿ. ದೇವೇಂದ್ರಪ್ಪ, ಮುಖಂಡರಾದ ಕೋಗುಂಡೆ ಮಂಜುನಾಥ್, ಜಿ.ಕೆ. ನಟರಾಜ್, ಡಿ.ವಿ.ಎಸ್. ಪ್ರವೀಣ್ ಕುಮಾರ್ ಇತ್ತರರು ಇದ್ದರು.
Kshetra Samachara
20/12/2024 12:40 pm