ಬೆಳಗಾವಿ : ಹೋರಾಟ ಹತ್ತಿಕ್ಕುವ ಕೆಲಸ ಮುಖ್ಯಮಂತ್ರಿ ಕುಮ್ಮಕ್ಕಿನಿಂದ ಮೊನ್ನೆದಿನ ಆಗಿದೆ, ಲಾಠಿ ಪ್ರಹಾರ ಮಾಡಿ ನೂರಾರು ಜನಕ್ಕೆ ಹೊಡೆದು ಬೆದರಿಕೆ ಹಾಕಿ ಷಡ್ಯಂತ್ರ ಕುತಂತ್ರ ಮಾಡಿದ್ದು, ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪಂಚಮಸಾಲಿ ಸಮಾಜದ ನಾಯಕರ ಮೇಲೆ ಲಾಠಿ ಪ್ರಹಾರ ವಿಚಾರವಾಗಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸಮಾಜದ ಡಿಮ್ಯಾಂಡ ಇದೆ, ಇದರ ಬಗ್ಗೆ ಚರ್ಚೆ ಮಾಡೋಣ ಅಂತಾ ಸಿಎಂ ಹೇಳಿದ್ದಾರೆ ಆದರೆ, ಇದು ಒಂದು ಭಾಗ ಆದರೆ, ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು, ಕಾರ್ಯಕರ್ತರು ಬಂದು ಹೋರಾಟ ಮಾಡೋವಾಗ ನಡುವಳಿಕೆ ಹೇಗೆ ಇರಬೇಕು, ಸರ್ಕಾರದ ಮುಖ್ಯಮಂತ್ರಿಗಳ ನಡುವಳಿಕೆ ಹೇಗೆ ಇರಬೇಕು.
ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಳಲು ಇಚ್ಛೆಪಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸಿದ್ದರಾಮಯ್ಯಗೆ ವಿಶ್ವಾಸ ಇದೇಯೋ ಇಲ್ವೊ? ಕೇವಲ ಇದು ಪಂಚಮಸಾಲಿ ಸಮಾಜದ ಪ್ರಶ್ನೆಯಲ್ಲ, ಇದನ್ನ ನಾಡಿನ ಜನತೆ ಪ್ರಶ್ನೆ ಇದೆ. ಸಿಎಂಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇದ್ದಿದ್ದೆ ಆಗಿದ್ದೆ ಅವರ ಮನವಿ ಸ್ವೀಕರಿಬಹುದಿತ್ತು. ಪಂಚಮಸಾಲಿ ಸಮಾಜದ ಅಹವಾಲು ಸ್ವೀಕಾರ ಮಾಡಬೇಕಿತ್ತು. ಸರ್ಕಾರ ಪೊಲೀಸರನ್ನ ದುರುಪಯೋಗ ಮಾಡಿಕೊಂಡು ಲಾಠಿ ಪ್ರಹಾರ ಮಾಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು. ದರ್ಪದಿಂದ ಮೆರೆದ ಅಧಿಕಾರಿಗಳ ಸಸ್ಪೆಂಡ ಮಾಡಬೇಕೆಂದು ಆಗ್ರಹಿದರು.
ಪಂಚಮಸಾಲಿ ಸಮಾಜದ ಮುಖಂಡರ ಮೇಲೆ ಲಾಠಿ ಖಂಡಿಸಿ ಸುವರ್ಣಸೌಧ ಮುಂದೆ ಪ್ರತಿಭಟನೆ ಮಾಡಿ, ಬಿಜೆಪಿ ಶಾಸಕರು ಇವತ್ತು ಸುವರ್ಣಸೌಧ ಮುಂದೆ ಪ್ರತಿಭಟನೆ ಮಾಡಿ ಸದನದಲ್ಲಿ ಪ್ರಸ್ತಾಪ ಮಾಡಿ ಸಿಎಂ ಉತ್ತರ ಪಡೆಯುತ್ತೇವೆ ಎಂದರು.
PublicNext
12/12/2024 11:42 am