ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ; ಕೇವಲ 30 ಗುಂಟೆಯಲ್ಲಿ ಬದನೆಕಾಯಿ ಬೆಳೆದು 15 ಲಕ್ಷ ರೂಪಾಯಿ ಲಾಭ ಗಳಿಸಿದ ರೈತ

ಚಿಕ್ಕೋಡಿ: ಭೂಮಿ ತಾಯಿಯನ್ನು ನಂಬಿದ ರೈತನಿಗೆ ಎಂದಿಗೂ ಮೋಸವಾಗಿಲ್ಲ ಎಂಬ ಹಿರಿಯರ ಮಾತಿನಂತೆ ಇಲ್ಲೊಬ್ಬ ಯುವ ರೈತ 30 ಗುಂಟೆಯಲ್ಲಿ ಕೇವಲ ಆರು ತಿಂಗಳಲ್ಲಿಯೇ ಬದನೆಕಾಯಿ ಬೆಳೆದು 15 ಲಕ್ಷ ರೂ ಬಂಪರ್ ಬೆಳೆ ತೆಗೆದು ಇತರ ರೈತರಿಗೆ ಮಾದರಿಯಾಗಿದ್ದಾನೆ.

ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದ ಯುವ ರೈತರಾದ ಅನಿಲ ಹಜಾರೆ ಮತ್ತು ಸುನೀಲ ಹಜಾರೆ ಅವರು ತಮ್ಮ ಅರ್ಧ ಎಕರೆಯಲ್ಲಿ 1093 ತಳಿಯ ಬದನೆಕಾಯಿ ಬೆಳೆ ನಾಟಿ ಮಾಡಿದ್ದರು. ನಾಟಿ ಮಾಡಿ ಆರು ತಿಂಗಳಲ್ಲಿಯೇ ಬದನೆಕಾಯಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಕ್ಕಿದೆ. ಆರು ತಿಂಗಳಲ್ಲಿ ಸುಮಾರು 40 ಟನ್ ಬದನೆಕಾಯಿ ಇಳುವರಿ ತೆಗೆದು ಸುಮಾರು 15 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ವಾಣಿಜ್ಯ ಬೆಳೆ ಕಬ್ಬು ನಾಟಿ ಮಾಡಲು ಪ್ರತಿಯೊಬ್ಬರು ಮುಂದಾಗುತ್ತಾರೆ. ಅರ್ಧ ಎಕರೆಯಲ್ಲಿ ಕಬ್ಬು ನಾಟಿ ಮಾಡಿದರೆ 25 ರಿಂದ 30 ಟನ್ ಇಳುವರಿ ಬಂದು 75 ಸಾವಿರದಿಂದ 90 ಸಾವಿರದವರೆಗೆ ಆದಾಯ ಬರುತ್ತಿತ್ತು. ಆದರೆ ಕಾಡಾಪೂರದ ರೈತ ಅನಿಲ,ಸುನಿಲ ಹಜಾರೆ ಅವರು ವೈಜ್ಞಾನಿಕವಾಗಿ ಬದನೆಕಾಯಿ ನಾಟಿ ಮಾಡಿ ಆರು ತಿಂಗಳಲ್ಲಿಯೇ 40 ಟನ್ ಇಳುವರಿ ಪಡೆದು 15 ಲಕ್ಷ ರೂ ಆದಾಯ ಗಳಿಸಿ ಇತರೆ ಯುವ ರೈತರಿಗೆ ಮಾದರಿಯಾಗಿದ್ದಾರೆ.

ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಕೈಸುಟ್ಟುಕೊಂಡು ಕೃಷಿನೆ ಬೇಡ ಎನ್ನುವ ಸ್ಥಿತಿಯಲ್ಲಿ ಇದ್ದೆವು. ಕರ್ನಾಟಕದ ಗಡಿ ಭಾಗ ಮತ್ತು ಮಹಾರಾಷ್ಟ್ರದ ಇಚಲಕರಂಜಿ, ಸಾಂಗ್ಲೀ, ಕೊಲ್ಲಾಪೂರ ಜಿಲ್ಲೆಯಲ್ಲಿ ಹೆಚ್ಚು ಮಾರಾಟವಾಗುವ 1093 ಬದನೆಕಾಯಿಯ ಸುಮಾರು 2500 ಸಸಿಗಳನ್ನು ಅರ್ಧ ಎಕರೆಯಲ್ಲಿ ನಾಟಿ ಮಾಡಿದೆವು. ಸದ್ಯ 40 ಟನ್ ಇಳುವರಿ ಬಂದು ನಮ್ಮ ಜೀವನ ಬದಲಿಸಿದೆ ಎಂದು ರೈತರಾದ ಅನಿಲ ಮತ್ತು ಸುನಿಲ ಖುಷಿ ಪಟ್ಟರು.

ಒಟ್ಟಿನಲ್ಲಿ ಕೇವಲ 30 ಗುಂಟೆಯಲ್ಲಿ ಬದನೆಕಾಯಿ ಬೆಳೆದು 15 ಲಕ್ಷ ರೂಪಾಯಿ ಲಾಭ ಗಳಿಸಿದ ಹಜಾರೆ ಸಹೋದರರ ಕಾರ್ಯ ಇತರರಿಗೆ ಮಾದರಿ.

Edited By : Somashekar
PublicNext

PublicNext

11/12/2024 02:40 pm

Cinque Terre

10.73 K

Cinque Terre

0

ಸಂಬಂಧಿತ ಸುದ್ದಿ