ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: "ನಮ್ಮ ನೀರು ನಮ್ಮ ಹಕ್ಕು"- ಬೃಹತ್ ಹೋರಾಟಕ್ಕೆ ಗಡಿ ರೈತರು ಸಜ್ಜು

ಅಥಣಿ: ಕಾಗವಾಡ ವಿಧಾನಸಭಾ ವ್ಯಾಪ್ತಿಯ ಮದಬಾವಿ ಹಾಗೂ ಅನಂತಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸುಮಾರು 23 ಹಳ್ಳಿಗಳಿಗೆ ನೀರು ಒದಗಿಸುವ ಬೃಹತ್ ಯೋಜನೆಯ ವಿಳಂಬದ ಕುರಿತಂತೆ ಗಡಿ ರೈತರು ರಾಜ್ಯ ಸರ್ಕಾರದ ಗಮನ ಸೆಳೆಯಲು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ.

ಡಿಸೆಂಬರ್ 13ರಂದು "ನಮ್ಮ ನೀರು ನಮ್ಮ ಹಕ್ಕು" ಎಂಬ ಘೋಷ ವಾಕ್ಯದೊಂದಿಗೆ ಅಥಣಿ ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಸರ್ಕಲ್ ವರೆಗೂ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಅಷ್ಟರಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಕಾಮಗಾರಿಗೆ ಹಣ ಬಿಡುಗಡೆ ಮಾಡದೇ ಇದ್ದಲ್ಲಿ ಡಿಸೆಂಬರ್‌ 14ರಂದು ಅಥಣಿ ಬಂದ್ ಗೆ ಕರೆ ನೀಡಲಾಗುವುದು ಎಂದು ಮಾಜಿ ಸೈನಿಕರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Edited By : Shivu K
PublicNext

PublicNext

11/12/2024 10:53 pm

Cinque Terre

5.22 K

Cinque Terre

0

ಸಂಬಂಧಿತ ಸುದ್ದಿ