ಬೆಳಗಾವಿ : ಅಮಾಯಕ ಲಿಂಗಾಯತ ಕಾರ್ಯಕರ್ತರು ಮೇಲೆ ಹೀನಾಯವಾಗಿ ಹಲ್ಲೆ. ಇದೊಂದ ಅಕ್ಷಮ್ಯ ಅಪರಾಧ. ಇದುವರೆಗೆ ಯಾರು ಲಿಂಗಾಯತರ ಮೇಲೆ ಕೈ ಎತ್ತಿಲ್ಲ ಮೊದಲ ಬಾರಿಗೆ ಸಿದ್ದರಾಮಯ್ಯ ಕೈ ಎತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಪಂಚಮಸಾಲಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಎರಡು ನಾಲಿಗೆ ಸರ್ಕಾರ. ಭಾಷಣದಲ್ಲಿ ಬಸವಣ್ಣನವರು ವಚನಗಳು, ಕಾರ್ಯರೂಪದಲ್ಲಿ ಅನುಯಾಯಿಗಳ ಮೇಲೆ ಲಾಠಿ ಏಟು. ಪ್ರಜಾಪ್ರಭುತ್ವ ಇದ್ದೋವೋ ಎಮರ್ಜೆನ್ಸಿನಲ್ಲಿ ಇದ್ದೋವೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಲಿಂಗಾಯತ ಹೋರಾಟ ನಾವು ತಡೆದಿಲ್ಲ, ಸಣ್ಣ ಗಲಾಟೆ ಆಗದಂತೆ ಕ್ರಮ ವಹಿಸಿದ್ವಿ ಎಂದರು
ರಾಜ್ಯಾಧ್ಯಕ್ಷ, ನಾರಾಯಣರಾವ್ ಸ್ವಾಮೀಜಿ ಸೇರಿ ಹಲ್ಲೆಗೊಳಗಾದವರನ್ನ ನೋಡೋಕೆ ಹೊರಟಿದ್ವಿ. ಈಗ ಏಕಾಏಕಿ ಅವರನ್ನ ಶಿಪ್ಪಿಂಗ್ ಮಾಡಿದ್ದಾರೆ ಎಲ್ಲಿ ತೆಗೆದುಕೊಂಡು ಹೋಗಿದ್ದಾರೆ ಅದೂ ಗೊತ್ತಿಲ್ಲ. ಹಲ್ಲೆಗೊಳಗಾದವರನ್ನ ನೋಡಲು ಅವಕಾಶ ಇಲ್ಲ. ರಾಜ್ಯದಲ್ಲಿ ಹಿಟ್ಲರ್ ರೀತಿ ಸರ್ಕಾರದ ನಡೆಯುತ್ತಿದೆ. ಅಧಿವೇಶನದಲ್ಲಿ ಬಾಣಂತಿ ಸಾವು, ರೇಷನ ಕಾರ್ಡ್ ಅವಾಂತರ ಚರ್ಚೆ ಆಗಬೇಕಿತ್ತು. ಅಧಿವೇಶನ ನಡೆಸೊದಕ್ಕೂ ಮೀನಾಮೇಷ ಮಾಡ್ತಿದೆ, ಕೇಳಿದ್ರೆ ಸಬೂಬ ಮೇಲೆ ಸಬೂಬ ಹೇಳ್ತಿದೆ ಎಂದರು.
ನಾವು ಲಿಂಗಾಯತ ಲಾಠಿ ಹಲ್ಲೆ ಖಂಡಿಸಿ ಹೋರಾಟ ಮಾಡುತ್ತೇವೆ. ಇದೊಂದು ತುಘಲಕ್ ಸರ್ಕಾರ ಅಂತಾ ಹೋರಾಟ ಮಾಡುತ್ತೇವೆ. ಲಿಂಗಾಯತ ಸಮಾಜದವರು ರಸ್ತೆ ತಡೆ ಮಾಡುತ್ತೆ, ಸರ್ಕಾರದ ಸಣ್ಣ ಅಪರಾಧಗೊಸ್ಕರ ಲಾಠಿ ಪ್ರಹಾರ ಮಾಡಿದೆ. ಪೊಲೀಸರು ಕಂಟ್ರೋಲ್ ಮಾಡಬೇಕಿತ್ತು ದಂಗೆ ಏಳುವ ಹಾಗೆ ಮಾಡಿದ್ದಾರೆ ಎಂದು ಆರ್ ಅಶೋಕ ಆಕ್ರೋಶ ಹೊರ ಹಾಕಿದರು.
PublicNext
12/12/2024 11:30 am