ಬೆಳಗಾವಿ: ಪಂಚಮಸಾಲಿ ಹೋರಾಟ ವೇಳೆ ಲಾಠಿ ಪ್ರಹಾರ ನಾನೂ ಕೂಡಾ ಖಂಡಿಸುತ್ತೇನೆ. ಆಗಿರುವ ಘಟನೆ ಬಗ್ಗೆ ಸಿಎಂ ಕ್ಷಮೆ ಕೇಳುವುದು ಎಷ್ಟರ ಮಟ್ಟಿಗೆ ಸರಿ ನನಗೆ ಗೊತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಹೋರಾಟದ ಬಗ್ಗೆ ಹಾಗೂ ಅಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಇಲ್ಲ. ಯಾವುದೇ ಸರ್ಕಾರ ಬಂದಾಗ ಯೋಚನೆ ಮಾಡಿ ಮಾಡಬೇಕು ಎಂದರು.
ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದವರು ನಮಗೆ ಚರ್ಚೆ ಮಾಡಲು ಅವಕಾಶ ಕೊಡಬೇಕು. ಅದನ್ನ ಬಿಟ್ಟು ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.. ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಬೇಕು. ವಿರೋಧ ಪಕ್ಷ ವಿಶೇಷವಾಗಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಒತ್ತು ನೀಡಬೇಕು. ಎರಡು ಪಕ್ಷಗಳು ರೆಡಿ ಇರಬೇಕು ಆಗ ಮಾತ್ರ ಚರ್ಚೆಗೆ ಒಂದು ಸ್ಥಾನ ಸಿಗುತ್ತೆ ಎಂದರು.
ವಕ್ಫ್ ಬೋರ್ಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಯಾವುದೇ ಪೊಲಿಟಿಕಲ್ ಇಶ್ಯೂ ಮಾಡಲು ನಿಸ್ಸೀಮರಾಗಿದ್ದಾರೆ . ಕೇಂದ್ರದಲ್ಲೂ ಕೂಡಾ ಬಿಜೆಪಿಯವರು ಇದನ್ನೇ ಮಾಡಿದ್ದಾರೆ ಎಂದರು.
PublicNext
12/12/2024 12:35 pm