ಚನ್ನಮ್ಮನ ಕಿತ್ತೂರು : ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಬೆಳಗಾವಿ ಅಧಿವೇಶನದ ವೇಳೆ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಪೊಲೀಸ್ ರಿಂದ ಲಾಠಿ ಚಾರ್ಜ್ ನಡೆದ ಹಿನ್ನೆಲೆ ಕಿತ್ತೂರಿನ ಚನ್ನಮ್ಮನ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಾಜಿಯ ವೃತ್ತದಲ್ಲಿ ನೂರಾರು ಪಂಚಮಸಾಲಿ ಸಮಾಜದ ಬಾಂಧವರಿಂದ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಡಿಜಿಪಿ ಅವರ ವಿರುದ್ಧ ಘೋಷಣೆ ಕೂಗಿದರು.
ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷ ಡಿ. ಅರ್. ಪಾಟೀಲ, ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಎಸ್. ಡಿ. ಬೋಗೂರ, ವಕೀಲರಾದ ಎಸ್ ಎಸ್ ಸವದತ್ತಿ, ರಾಜು ಬುಡಶೇಟ್ಟಿ, ಮುಖಂಡರಾದ ಕಿರಣ ಪಾಟೀಲ, ಕಿರಣ ವಾಳದ, ಕಲ್ಲಪ್ಲ ಕಟಗಿ, ನಾಗೇಶ ಬೇಣ್ಣಿ, ಮಯೂರ ಗಿರಿಯಾಲ, ವಿರುಪಾಕ್ಷಗೌಡ ಪಾಟೀಲ, ಅನೀಲ ಎಮ್ಮಿ, ಸಂಗಮೇಶ ನರಗುಂದ, ಪ್ರವೀಣಗೌಡ ಜಕ್ಕನಗೌಡರ, ಬಸವರಾಜ ಮಾತನವರ, ಬಸವರಾಜ ಅಳ್ನಾವರ, ಉಮೇಶ ಹುಂಬಿ, ಬಸವರಾಜ ಅವರಾದಿ ಸೇರಿದಂತೆ ಅನೇಕರು ಇದ್ದರು.
PublicNext
12/12/2024 01:28 pm