ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಖಾಸಗಿ ಸಂಸ್ಥೆಗಳಲ್ಲಿ ಹಣ ಡೆಪಾಜಿಟ್ ಮಾಡಿ ಮೋಸ ಹೋದವರಿಂದ ಪ್ರತಿಭಟನೆ

ಬೆಳಗಾವಿ: ಖಾಸಗಿ ಸಂಸ್ಥೆಗಳಲ್ಲಿ ಹಣ ಡೆಪಾಜಿಟ್ ಮಾಡಿ ಮೋಸ ಹೋದ T.H.U.G.S ಮತ್ತು TPJP ಸಂಘದ ವತಿಯಿಂದ ತಮಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಇಂದು ನಗರದ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಿ, ಸರ್ಕಾರ ಮಧ್ಯಸ್ಥಿಕೆ ವಹಿಸಿ 280 ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಸಾರ್ವಜನಿಕರಿಗೆ ಹಣ ದ್ವಿಗುಣ, ನಿವೇಶನ ಮಾರಾಟ ಸೇರಿದಂತೆ ಪ್ರಾಡಕ್ಟ್ ಮಾರಾಟಗಳ ಹೆಸರಿನಲ್ಲಿ ವಂಚನೆ ಮಾಡಿವೆ. ಸರ್ಕಾರ ಅಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿವೆ. ಕಳೆದ ಹತ್ತಾರು ವರ್ಷಳಿಂದ ಠೇವಣಿ ಕಳೆದುಕೊಂಡ ಬಡ ಹಾಗೂ ಮಧ್ಯಮ ವರ್ಗದ ಜನರು ಅಭದ್ರತೆ ಅನುಭವಿಸುತ್ತಿದ್ದಾರೆ. ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ಸರ್ಕಾರ ಹದಿನೆಂಟು ತಿಂಗಳ ಅವಧಿಯಲ್ಲಿ ಎರಡರಿಂದ ಮೂರು ಪಟ್ಟು ಹಣ ಮರಳಿಸುವ ನ್ಯಾಯಾಲಯದ ಆದೇಶ ಪರಿಗಣಿಸಿ ತಮಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

12/12/2024 04:02 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ