ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾನೂನು ಕೈಗೆತ್ತಿಕೊಂಡಿದ್ದರಿಂದ ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ್ - ಸದನಕ್ಕೆ ಉತ್ತರ ನೀಡಿದ ಪರಮೇಶ್ವರ್

ಬೆಳಗಾವಿ: ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ್ ನಡೆದ ಕುರಿತು ಇಂದು ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಸದನಕ್ಕೆ ಲಾಠಿ ಚಾರ್ಜ್ ಕುರಿತು ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದರು. ಕೊನೆಗೂ ಲಾಠಿ ಚಾರ್ಜ್ ನಡೆದ ಕುರಿತು ಸದನಕ್ಕೆ ಪರಮೇಶ್ವರ ಉತ್ತರಿಸಿದ್ದಾರೆ.

ಒಂದು ಕಡೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ ಟ್ರ್ಯಾಕ್ಟರ್‌ಗೆ ನಾವು ಅವಕಾಶ ನೀಡಿರಲಿಲ್ಲ ಆದ್ರೂ ಅವರು ಟ್ರ್ಯಾಕ್ಟರ್‌ನಲ್ಲಿ ಬಂದಿದ್ದಾರೆ. ನಾವು ಸಚಿವರನ್ನು ಕಳುಹಿಸಿ ಮನವೊಲಿಸಲು ಪ್ರಯತ್ನ ಮಾಡಿದ್ವಿ. ಆದರೆ ಅದಕ್ಕೆ ಅವರ ರೆಸ್ಪಾಸ್ ಮಾಡಲಿಲ್ಲ ಅಲ್ಲಿ ಭಾಷಣ ಮುಗಿದ ನಂತರ ಸ್ವಾಮೀಜಿಗಳೇ ಹೇಳ್ತಾರೆ. ಸುವರ್ಣಸೌಧಕ್ಕೆ ನಡೀರಿ ಹೋಗೋಣ ಅಂತಾ ಇದಕ್ಕೆ ಸಂಭಂದಸಿದ ವೀಡಿಯೋ ಸಹ ನಮ್ಮ ಬಳಿ ಇದೆ. ಅವಾಗ ಜನರು ಈ ಕಡೆ ಬರೋಕೆ ಶುರು ಮಾಡ್ತಾರೆ. ಪೊಲೀಸರು ಅವರನ್ನು ತಡೆಯುತ್ತಾರೆ ಟ್ರ್ಯಾಕ್ಟರ್‌ಗಳು ಬರಬಾರದು ಅಂದಿದ್ದೇವೆ. ಆದರೆ 20 ಟ್ರ್ಯಾಕ್ಟರ್ ಗಳಿಂದ ಬಂದು ಪೊಲೀಸರನ್ನೇ ತಳ್ಳಿದ್ದಾರೆ. ಕಲ್ಲುಗಳಿಂದಲೂ ಪೊಲೀಸರಿಗೆ ಹೊಡೆಯುತ್ತಾರೆ. ಇದೆಲ್ಲವೂ ನಮ್ಮ ಬಳಿ ವಿಡಿಯೋ ರೆಕಾರ್ಡ್ ಇದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಆಗ ಪ್ರತಿಭಟನೆಕಾರರು ಬ್ಯಾರಿಕೇಡ್ ತಳ್ಳಿ, ಪೊಲೀಸರನ್ನು ತಳ್ಳುತ್ತಾರೆ, ಕಲ್ಲು ಹೊಡೆಯುತ್ತಾರೆ, ಸುವರ್ಣಸೌಧಕ್ಕೆ ನುಗ್ಗುತ್ತಾರೆ ಅಂದರೆ, ಪೊಲೀಸರು ಏನ್ ಮಾಡ್ತಾರೆ..? ಪೊಲೀಸರು ಏನು‌ ಮನುಷ್ಯರು ಅಲ್ವಾ..? 24 ಜನ ಪೊಲೀಸರು ಗಾಯಗಳಾಗಿದ್ದಾವೆ ಎಂದರು. ಆಗ ವಿಪಕ್ಷ ಗೃಹ ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದರು. ಆಗ ಪರಮೇಶ್ವರ್ ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ, ನಿಜನೇ ಹೇಳ್ತಿದ್ದೇನೆ. ಪ್ರತಿಭಟನೆ ನಿಮ್ಮ ಹಕ್ಕು. ಆದರೆ ಶಾಂತಿಯುತ ವಾಗಿರಬೇಕು ಎಂದು ಮೊನ್ನೆ ನಡೆದ ಲಾಠಿ ಚಾರ್ಜ್ ಘಟನೆಯನ್ನು ಸದನದಲ್ಲಿ ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.

Edited By : Manjunath H D
PublicNext

PublicNext

12/12/2024 04:30 pm

Cinque Terre

11.73 K

Cinque Terre

4

ಸಂಬಂಧಿತ ಸುದ್ದಿ