ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬಿಜೆಪಿಯವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು - ಸಚಿವ ಸಂತೋಷ್ ಲಾಡ್

ಬೆಳಗಾವಿ: ಬಿಜೆಪಿಯವರು ಕೇವಲ ಆರೋಪ ಮಾಡೋದು ಬಿಟ್ಟು ಮತ್ತೇನು ಇಲ್ಲ. ನಮ್ಮ ಸರ್ಕಾರ ಬಂದಾಗೆಲ್ಲಾ, ಎಷ್ಟು ಬಾರಿ ವಿಧಾನಸಭೆ ನಡೆಸಿದ್ದೇವೆ ಕೇಳಿ ನೋಡಿ. ಅವರೆಷ್ಟು ಬಾರಿ ನಡೆಸಿದ್ದಾರೆ ಅದನ್ನು ಕೇಳಿ ಎಂದು ಸ್ಪೀಕರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಬಿಜೆಪಿ ಆರೋಪದ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವರ್ಷದಲ್ಲಿ 50 ದಿನವೂ ನಡೆಸಿಲ್ಲ, ನಾವು 80 ರಿಂದ 100 ದಿನ ನಡೆಸಿದ್ದೇವೆ. ಇದರ ಅರ್ಥ ನಮಗೆ ಚರ್ಚೆ ಬೇಕು. ಅವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು, ಇದನ್ನು ಮಾಡೋದರಿಂದ ರಾಜಕೀಯ ಮೈಲೇಜ್ ಸಿಗಬೇಕು ಬೇರೇನೂ ಇಲ್ಲ‌. ಅವಿಶ್ವಾಸ ಮಂಡನೆ ಮಾಡಲು ಅವರ ಬಳಿ ಏನ್ ರೀಸನ್ ಇದೆ. ಯಾಕೆ ಮಾಡ್ತಾರೆ, ಚರ್ಚೆಗೆ ಅವಕಾಶ ಕೊಟ್ಟಿಲ್ವಾ ಹೇಳಿ, ವಕ್ಫ್, ಮುಡಾ, ಮೆಡಿಕಲ್ ಎಲ್ಲಾ ವಿಚಾರದಲ್ಲಿ ಅವಕಾಶ ಕೊಟ್ಟಿದ್ದೇವೆ ಎಂದರು.‌

ಕೇಂದ್ರದವರು ಅದಾನಿ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದಾರಾ..? ಕೇಳಿ ಬಿಜೆಪಿಯರನ್ನು ಯಾಕೆ ಅವಕಾಶ ಕೊಟ್ಟಿಲ್ಲಾ. ಇದು ಇಂಪಾರ್ಟೆಂಟ್ ಇಲ್ವಾ. ಏಕ ಪಕ್ಷೀಯ ಅಂದ್ರೆ ಏನು ಯಾವ ವಿಚಾರದಲ್ಲಿ ನಾವು ಚರ್ಚೆ ಮಾಡುತ್ತಿಲ್ಲ ಹೇಳಲಿ, ಅವರು ರಾಜಕೀಯ ಮಾಡೋದನ್ನ ಮೊದಲು ಬಿಡಬೇಕು ಎಂದರು.

ಪಂಚಮಸಾಲಿಗೆ ಸಾಂವಿಧಾನಿಕವಾಗಿ ಮೀಸಲಾತಿ ಕೊಡಲು ಬರಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನದಲ್ಲಿ ಅವಕಾಶ ಇಲ್ಲಾ ಎಂಬ ಹೇಳಿಕೆ ಅದು ಸಮರ್ಪಕವಾದ ಉತ್ತರ ಎಂದು ಭಾವಿಸಿದ್ದೇನೆ. ಸಿಎಂ ಅವರೇ ಉತ್ತರ ಕೊಟ್ಟ ಬಳಿಕ ನಾವು ಏನ್ ಹೇಳಬೇಕು. ಆರೋಪ ಮಾಡುವವರು ಆರೋಪ ಮಾಡ್ತಾರೆ ಅಷ್ಟೆ, ಅವರ ಕಾಲದಲ್ಲಿ ಯಾಕೆ ಮೀಸಲಾತಿ ಆಗಿಲ್ಲಾ.? 2D ಕೊಟ್ಟಿದ್ದು ಹೇಗೆ, ಮುಸ್ಲಿಂರ ಮೀಸಲಾತಿ ತೆಗೆದು ಪಂಚಮಸಾಲಿಗೆ ಕೊಟ್ಟಿದ್ದಾರೆ . ಇವರೇನು ಹೆಚ್ಚಿಗೆ ಕೊಟ್ಟಿದ್ದಾರೆ‌. ಮೀಸಲಾತಿ ಕೊಡೋದು ಬಿಡೋದು ಸರ್ಕಾರ ತೀರ್ಮಾನ ಮಾಡುತ್ತೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಹಿಂದೂಗಳಿಗೆ ವಿಶೇಷ ಅನುದಾನ ಕೊಡಬೇಕಿತ್ತು. ಕಳೆದ 11 ವರ್ಷದಿಂದ ಅಧಿಕಾರದಲ್ಲಿದ್ದಾರೆ. ನಾನು ನೀವೂ ಹಿಂದೂಗಳೇ ವಿಶೇಷ ಪ್ಯಾಕೇಜ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

Edited By : Manjunath H D
PublicNext

PublicNext

12/12/2024 06:21 pm

Cinque Terre

10.08 K

Cinque Terre

3

ಸಂಬಂಧಿತ ಸುದ್ದಿ