ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟಕ್ಕೆ ನ್ಯಾಯವಾದಿಗಳ ಬೆಂಬಲ

ಚಿಕ್ಕೋಡಿ : ಪ್ರತ್ಯೇಕ ಜಿಲ್ಲೆಗಾಗಿ ಪಟ್ಟಣದ ಎ.ಸಿ.ಕಚೇರಿ ಎದುರಿಗೆ ನಿರಂತರ 4 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ವೇದಿಕೆಗೆ, ಆಗಮಿಸಿದ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ನ್ಯಾಯವಾದಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನ್ಯಾಯವಾದಿಗಳಾದ ಬಿ.ಆರ್.ಯಾದವ ಮಾತನಾಡಿ, ಚಿಕ್ಕೋಡಿ ಭಾಗದ ಜನರಿಗೆ ಅಭಿವೃದ್ಧಿ ಕಾರ್ಯಗಳು ಕನಸಾಗಿಯೇ ಉಳಿದಿವೆ, ಚಿಕ್ಕೋಡಿ ಜಿಲ್ಲೆ ಆದರೆ ಮಾತ್ರ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.

ಎಸ್.ಆರ್.ವಾಲಿ ಅವರು ಮಾತನಾಡಿ, ದಶಕಗಳಿಂದ ಹೋರಾಟ ಸಮಿತಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುತ್ತಲಿದೆ, ಹಲವಾರು ಹಿರೀಯ ನ್ಯಾಯವಾದಿಗಳು ಸಕ್ರೀಯವಾಗಿ ಭಾಗವಹಿಸಿ 25 ವರ್ಷಗಳು ಕಳೆದರೂ ಸಹ ಯಶಸ್ಸು ದೊರೆಯದೇ ನಿರಾಶರಾಗಿದ್ದಾರೆ, ರಾಜಕಾರಣಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿ ಈ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಿಸಬೇಕು, ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಮತ್ತು ನ್ಯಾಯವಾದಿಗಳು ಆದ, ಎಚ್.ಎಸ್.ನಸಲಾಪುರೆ, ಎಸ್.ಎಲ್.ಯರನಾಳೆ, ಮೋಹನ ಮೋಟಣ್ಣವರ, ರವಿ ಹುದ್ದಾರ, ಬಿ.ಎನ್.ಪಾಟೀಲ, ಮಹಾದೇವ ಭೆಂಡವಾಡೆ, ಎಮ್.ಆರ್.ಸಗರೆ, ವಿನೋದ ಪಾಟೀಲ, ಅರುಣ ಬೋಳಾಜ, ಎಮ್.ಕೆ.ಪೂಜೇರಿ, ಎ.ಎ.ಚೌಗಲಾ, ಡಿ.ಆರ್.ಕೋಟ್ಯಾಪ್ಪಗೋಳ, ರವಿ ಹಿರೆಕೋಡಿ, ಅಶೋಕ ಹರಗಾಪುರೆ,ಎಸ್.ವಾಯ್.ಪಾಟೀಲ ಹಾಗೂ ನೂರಾರು ಸಂಖ್ಯೆಯಲ್ಲಿ ನ್ಯಾಯವಾದಿ ಬಾಂಧವರು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

12/12/2024 05:19 pm

Cinque Terre

4.46 K

Cinque Terre

0

ಸಂಬಂಧಿತ ಸುದ್ದಿ