ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣು

ಕಾಗವಾಡ: ಅತ್ತೆ, ಗಂಡನ ಮಾನಸಿಕ ಹಿಂಸೆಯಿಂದ ವಿವಾಹಿತ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದಿದೆ.

ಮಂಗಸೂಳಿ ಗ್ರಾಮದ ಧನಶ್ರೀ ಚೇತನ ಮಹಾಲದಾರ (23) ಮೃತ ದುರಾದೈವಿಯಾಗಿದ್ದಾಳೆ. ಮಂಗಸೂಳಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಾರಾಷ್ಟ್ರದ ಶಿರೋಳ ತಾಲೂಕಿನ ಕೌಟೇಸಾರ ಗ್ರಾಮದ ಯುವತಿಯನ್ನು ಕಳೆದ ಮೂರು ವರ್ಷದ ಹಿಂದೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಕೊಡಲಾಗಿತ್ತು.

ಇವರಿಗೆ ಮುದ್ದಾದ ಒಂದೂವರೆ ವರ್ಷದ ಮಗು ಇದ್ದು ಕಳೆದ ಎರಡು ವರ್ಷಗಳಿಂದ ಗಂಡ ಹಾಗೂ ಅತ್ತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಧನಶ್ರೀ ತಂದೆ ಗಂಡನ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.

Edited By : Shivu K
PublicNext

PublicNext

11/12/2024 10:30 pm

Cinque Terre

7.31 K

Cinque Terre

0

ಸಂಬಂಧಿತ ಸುದ್ದಿ