ಬೆಳಗಾವಿ: ಬೆಳಗಾವಿಯಲ್ಲಿ 10ಕ್ಕೂ ಅಧಿಕ ಯುವಕರ ಗುಂಪಿನಿಂದ ಅನ್ಯಕೋಮಿನ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಗಾವಿ ನಗರದ ಆರ್‌ಪಿಡಿ ಸರ್ಕಲ್ ಬಳಿ ನಡೆದಿದೆ.
ನಗರದ ಖಾಸಬಾಗ ಪಾಟೀಲ್ ಗಲ್ಲಿಯಲ್ಲಿ ನೂರ ಬಸೀರ್ ಅಹ್ಮದ್ ಹೊಸಪೇಟ್, ಮಂಜೂರ್ ಹೊಸಪೇಟ್ ಎಂಬುವವರ ಮೇಲೆ ದಾಳಿ ನಡೆಸಲಾಗಿದೆ. ಪೋನ್ ಮಾಡಿ ಕರೆಯಿಸಿ ಅನ್ಯಕೋಮಿನ ಇಬ್ಬರು ಸಹೋದರರ ತಲೆ, ಬೆನ್ನು, ಮುಖಕ್ಕೆ ಹೊಡೆದು ಹಲ್ಲೆ ಮಾಡಲಾಗಿದೆ.
ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ನಡೆದಿರೋ ಗಲಾಟೆಯಾಗಿದೆ ಎಂದು ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆಗೊಳಗಾದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಹಲ್ಲೆಗೊಳಗಾದ ಯುವಕರು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವದಾಗಿ ಡಿಸಿಪಿ ರೋಹನ್ ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.
PublicNext
09/12/2024 08:38 am