ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಕಾಳಗದಲ್ಲಿ ಸ್ಪರ್ಧೆ ಮಾಡುವ ಟಗರನ್ನು ನದಿಗೆ ಎಸೆದು ಹತ್ಯೆಗೈದ ದುರುಳರು

ಬೈಲಹೊಂಗಲ: ಕಾಳಗದಲ್ಲಿ ಸ್ಪರ್ಧೆ ಮಾಡುವ ಟಗರು ಒಂದನ್ನು ದುಷ್ಕರ್ಮಿಗಳು ಮಲಪ್ರಭಾ ನದಿಯಲ್ಲಿ ಎಸೆದು ಹೋದ ಘಟನೆ ಸೋಮವಾರ ನಡೆದಿದೆ.

ತಾಲೂಕಿನ ನಯಾನಗರ ಬಳಿ ಇರುವ ಮಲಪ್ರಭಾ ನದಿಯಲ್ಲಿ ತೇಲಿಬಂದ ಟಗರನ್ನು ಕಂಡ ಸ್ಥಳೀಯರು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಅವರನ್ನ ಸಂಪರ್ಕಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅವರು ನದಿಗೆ ಇಳಿದು ಮೃತಪಟ್ಟ ಟಗರನ್ನು ನದಿ ತೀರಕ್ಕೆ ತಂದು ಅಂತಿಮ ಸಂಸ್ಕಾರ ನೆರವೇರಿಸಿದರು.

ನಾಲ್ಕು ಹಲ್ಲಿನ ಸುಮಾರು ಮೂರು ಲಕ್ಷ ಬೆಲೆ ಬಾಳುವ ಟಗರನ್ನು ದುಷ್ಕರ್ಮಿಗಳು ಅಪಹರಿಸಿ ಅದರ ಬಾಯಲ್ಲಿ ಬಟ್ಟೆ ಹಾಕಿ ನದಿಗೆ ಎಸೆದಿದ್ದಾರೆ.

Edited By : Ashok M
PublicNext

PublicNext

10/12/2024 08:10 pm

Cinque Terre

24.51 K

Cinque Terre

0

ಸಂಬಂಧಿತ ಸುದ್ದಿ