ಹುಬ್ಬಳ್ಳಿ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಹುಬ್ಬಳ್ಳಿಯ ಮೂವರು ಸಾವಿರ ಮಠದ ಆವರಣದಲ್ಲಿ ಸದ್ಭಾವ ವೇದಿಕೆ ನೇತೃತ್ವದಲ್ಲಿ ಬಹಿರಂಗ ಸಭೆ ಮಾಡಿದರು.
ಬಹಿರಂಗ ಸಭೆಯಲ್ಲಿ ನಾಡಿನ ಪ್ರತಿಷ್ಠಿತ ಮಠಾಧೀಶರರು ಭಾಗಿಯಾಗಿದ್ದು, ಪ್ರತಿಭಟನಾ ಸಭೆಯಲ್ಲಿ ಮೂರು ಸಾವಿರ ಮಠದ ಶ್ರೀ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಅವರ ಜೊತೆಗೆ ಬಸವಲಿಂಗ ಸ್ವಾಮೀಜಿ, ಬಸವಣ್ಣಜ್ಜನವರು, ಶಂಕರಣ್ಣ ಮುನವಳ್ಳಿ, ಮಾತಾ ತೇಜೋಮಯಿ, ಮಹಾದೇವ ಕರಮರಿ, ರಘತ್ತೋಮ ದಾಸ್ ಮುಂತಾದವರು ಕೂಡ ಸಾಥ್ ನೀಡಿದರು. ಅಷ್ಟೇ ಅಲ್ಲದೆ ಸಭೆ ನಂತರ ನಗರ ಮುಖ್ಯ ರಸ್ತೆಗಳಲ್ಲಿ ನೂರಾರು ಜನರು ಪಂಜಿನ ಮೆರವಣಿಗೆ ಮಾಡಿ ತಮ್ಮ ಬಲವನ್ನು ತೋರಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 10:46 pm