ಕುಂದಗೋಳ : ಮೀಸಲಾತಿಯ ನೆಪದಲ್ಲಿ ಜನಪ್ರತಿನಿಧಿಗಳಿಗೆ ಅಗೌರವವಾಗಬಾರದು, ಆಡಳಿತಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು, ಸ್ಥಾಯಿ ಸಮಿತಿಯನ್ನು ರಚನೆ ಮಾಡಬೇಕೆಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.
ಕುಂದಗೋಳ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಯನಕ್ಕಾಗಿ ಆಗಮಿಸಿದ್ದ ತಂಡವು ಮೀಸಲಾತಿಯಿಂದಾಗಿ ಆಡಳಿತಾಧಿಕಾರಿಗಳಿರುವಾಗ ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡದೆ ಪ್ರತಿ ತಿಂಗಳು ಸಭೆ ಮಾಡುವಂತೆ ಸಭೆ ಮಾಡಿ ಅಭಿವೃದ್ಧಿಗೆ ಸಲಹೆ ಸೂಚನೆ ಪಡೆದು ಅಭಿವೃದ್ಧಿ ಮಾಡುವಂತೆ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಸೂಚಿಸಿದರು.
ಚುನಾಯಿತ ಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚಿಸಿ 16ನೇ ಹಣಕಾಸಿನ ಯೋಜನೆ ರೂಪಿಸಲಾಗುತ್ತಿದ್ದು, ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲು ಮಾಹಿತಿಯನ್ನು ಸಮಿತಿಯವರು ಕಲೆ ಹಾಕಿದರು.
ಶಾಸಕ ಎಂ.ಆರ್. ಪಾಟೀಲ, ಕುಂದಗೋಳ ಪಟ್ಟಣದ ಅಭಿವೃದ್ಧಿಗೆ 15 ಕೋಟಿ ರೂಪಾಯಿ ಅನುದಾನ ನೀಡುವ ಕುರಿತು ಸಮಿತಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕು ಪಂಚಾಯತಿಗೆ 3 ಕೋಟಿಯಲ್ಲಿ 2 ಕೋಟಿ ಹಣ ಬಿಡುಗಡೆಗೊಂಡಿದ್ದು ಇನ್ನು 1 ಕೋಟಿ ರೂಪಾಯಿ ಬಿಡುಗಡೆ ಗೊಳಿಸಬೇಕಾಗಿದೆ ಕೂಡಲೇ ಬಿಡುಗಡೆ ಗೊಳಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಅನುದಾನ ಬಿಡುಗಡೆಗೊಳಿಸಲು ಸಮಿತಿಯವರ ಗಮನಕ್ಕೆ ತಂದರು.
ಸಭೆಯಲ್ಲಿ ಆಯೋಗದ ಸಮಿತಿಯ ಸದಸ್ಯರಾದ ಮಹಮ್ಮದ ಸನೂಲ್ಲಾ, ಆರ್. ಎಸ್.ಪೋಂಡೆ, ತಾಪಂ ಎಒ ಜಗದೀಶ ಕಮ್ಮಾರ, ಪಪಂ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಪ.ಪಂ ಸದಸ್ಯರಾದ ಗಣೇಶ ಕೊಕಾಟೆ, ಮಲ್ಲಿಕಾರ್ಜುನ ಕಿರೇಸೂರ, ವಾಗೇಶ ಗಂಗಾಯಿ, ಪ್ರವೀಣ ಬಡ್ಡಿ, ಬಸವರಾಜ ತಳವಾರ, ಹನಮಂತ ರಣತೂರ, ಹನುಮಂತಪ್ಪ ಮೇಲಿನಮನಿ, ದಿಲೀಪ ಕಲಾಲ ಉಪಸ್ಥಿತರಿದ್ದರು.
Kshetra Samachara
04/12/2024 06:02 pm