ಧಾರವಾಡ: 2022 ರಿಂದ 2024ರ ಜುಲೈವರೆಗೆ ಸರ್ಕಾರಿ ಕೆಲಸದಲ್ಲಿದ್ದು, ನಿವೃತ್ತರಾದವರಿಗೂ 7ನೇ ವೇತನ ಆಯೋಗದ ಸೌಲಭ್ಯ ಕಲ್ಪಿಸಬೇಕು ಎಂದು ನಿವೃತ್ತ ನೌಕರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿ ಮಾಡಿದೆ. ಈ ಆದೇಶವನ್ನು ಮರು ಪರಿಷ್ಕರಣೆ ಮಾಡಿ 2024ರ ಜುಲೈವರೆಗೂ ಸರ್ಕಾರಿ ಕೆಲಸದಲ್ಲಿದ್ದು, ನಿವೃತ್ತರಾದ ನೌಕರರಿಗೂ 7ನೇ ವೇತನ ಆಯೋಗದ ಸೌಲಭ್ಯ ಸಿಗುವಂತೆ ಮಾಡಬೇಕು. ಇಲ್ಲದೇ ಹೋದರೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನಿವೃತ್ತ ನೌಕರರು ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 08:41 pm