ಕುಂದಗೋಳ : 2024 ಮಾರ್ಚ್ ತಿಂಗಳಲ್ಲಿ 'ಆದರ್ಶ ಕಾಲೇಜು' ಎಂಬ ಬಿರುದು ಪಡೆದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಗ್ಗೆ ವಿದ್ಯಾರ್ಥಿಗಳೇ ಟೀಕೆ - ಆರೋಪಗಳ ಸುರಿಮಳೆಗೈದು ಅಭಿವೃದ್ಧಿ ಕೇಳಿದ್ದಾರೆ.
ಕುಂದಗೋಳ ಪಟ್ಟಣದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು 3 ದಿನಗಳ ಪ್ರವಾಸಕ್ಕೆ ಪ್ರಾಚಾರ್ಯರಿಗೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಪ್ರಾಚಾರ್ಯರು ಫೆಂಗಲ್ ಚಂಡಮಾರುತದ ಪರಿಣಾಮ ಸುರಕ್ಷತೆ ದೃಷ್ಟಿಯಿಂದ ಒಂದೇ ದಿನ ಪ್ರವಾಸಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೊತ್ತಿದ ಕಿಡಿ ಕಾಲೇಜು ಅವ್ಯವಸ್ಥೆಯನ್ನೇ ಜಾಲಾಡಿ ಬಿಟ್ಟಿದೆ.
ಮುಖ್ಯವಾಗಿ ಶೌಚಾಲಯ ಸ್ವಚ್ಛತೆ, ನೀರಿನ ಸಮಸ್ಯೆ, ಕೊಠಡಿ ಸ್ವಚ್ಛತೆ, ಆಟದ ಮೈದಾನ ಅಭಾವ, ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ, ಶೈಕ್ಷಣಿಕ ಕೊಠಡಿ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳು ಆರೋಪ ಎತ್ತಿದ್ದಾರೆ.
ಸದ್ಯ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ಸೇರಿ 416 ವಿದ್ಯಾರ್ಥಿಗಳನ್ನೂ ಒಳಗೊಂಡ ಕಾಲೇಜು ಅವ್ಯವಸ್ಥೆ ಬಗ್ಗೆ ಪ್ರಾಚಾರ್ಯರು ಕೊಟ್ಟ ಉತ್ತರ ಇಲ್ಲಿದೆ.
ಆದರ್ಶ ಕಾಲೇಜು ಹಣೆಪಟ್ಟಿ ಹೊತ್ತು ಕಂಪ್ಯೂಟರ್, ಪ್ರೊಜೆಕ್ಟರ್, ಲ್ಯಾಬ್ ಸೌಲಭ್ಯ ಪಡೆದ ಕಾಲೇಜು ಇದೀಗ ಮೂಲ ಸೌಕರ್ಯಗಳ ಇಲ್ಲದ ಬಗ್ಗೆ ವಿದ್ಯಾರ್ಥಿಗಳ ಟೀಕೆಗೆ ಪ್ರಾಚಾರ್ಯರು ಹೀಗಂದ್ರು..
ಒಟ್ಟಾರೆ ಬಡ, ಮಧ್ಯಮ ವರ್ಗದ ಮಕ್ಕಳ ಭವಿಷ್ಯಕ್ಕೆ ನೆರವಾಗಬೇಕಾದ ಕಾಲೇಜು ಅವ್ಯವಸ್ಥೆಯಿಂದ ಸುಧಾರಣೆಯಾಗಿ ಮಕ್ಕಳಿಗೂ ಆರೋಗ್ಯಕರ ಶಿಕ್ಷಣ ದೊರೆತರೆ ಸಮಾಜ ಸಾರ್ಥಕ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
04/12/2024 06:53 pm