ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಸೈಟ್ ಹೆಸರಲ್ಲಿ ಬಡವರಿಗೆ ವಂಚನೆ ಮಾಡಿದ ಡೆವಲಪರ್ಸ್, ಸೈಟ್ ಕೊಳ್ಳುವವರು ನೋಡಲೇಬೇಕಾದ ಸುದ್ದಿ

ಹುಬ್ಬಳ್ಳಿ: ಅವರೆಲ್ಲಾ ನಾಲ್ಕೈದು ಮನೆ ಕೆಲಸ ಮಾಡಿ, ದಿನ‌ ಕೂಲಿನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿಕೊಟ್ಟಿಕೊಳ್ಳುವ ಜನ. ಇರೋದು ಬಾಡಿ ಮನೆಯಲ್ಲಿ. ಈ ಜನರ ಈ ಬಲಹೀನತೆಯನ್ನೇ ಬಳಸಿಕೊಂಡು, ಅವರ ಬದುಕಿಗೆ ಕೊಳ್ಳಿಯಿಟ್ಟಿದ್ದೆ, ಉಳ್ಳವರ ದುರಾಸೆ. ಕೂಲಿ ಮಾಡಿದ್ರೂ ಸ್ವಾಭಿಮಾನ ಜೀವನ‌ ನಡೆಸುತ್ತಿದ್ದ ಇವರು ಈಗ ಬೀದಿಗೆ ಬಂದಿದ್ದಾರೆ.

ಒಂದು ಖಾಲಿ‌ ಸೈಟ್ ನಲ್ಲಿ ನಿಂತುಕೊಂಡು ನಮ್ಮ ಜೀವನ ಹಾಳಾಗಿ ಹೋಯಿತು ಅಂತ ಬಾಯಿ ಬಾಯಿ ಬಡಿದುಕೊಂಡು, ಕಣ್ಣೀರು ಹಾಕುತ್ತಿರುವ ದೃಶ್ಯ. ಮತ್ತೊಂದು ಕಡೆ ಸೈಟ್ ಪೇಪರ್ ಹಿಡಿದು ತಮ್ಮ ಸೈಟ್ ಹುಡುಕುತ್ತಿರುವ ದೃಶ್ಯ. ಇದು ಕಂಡುಬಂದದ್ದು ಹುಬ್ಬಳ್ಳಿ ಹೊರ ವಲಯದ ಸೋನಿಯಾ ಗಾಂಧಿ ನಗರ ಸಮೀಪದಲ್ಲಿನ ಸಾಯಿಬಾಬಾ, ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಜಾಗದಲ್ಲಿ. ಸ್ಲಂ ನಿವಾಸಿಗಳು, ಕೂಲಿ‌ ಮಾಡುವವರಿಗೆ, ಹುಬ್ಬಳ್ಳಿ ನಗರದಲ್ಲಿ ಅತೀ ಕಡಿಮೆ ದರದಲ್ಲಿ ಸ್ವಂತ ನಿವೇಶನ ನೀಡುತ್ತೀವಿ ಅಂತ ಆಸೆ ತೋರಿಸಿದ ಸಾಯಿಬಾಬ, ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್, ನೂರಾರು ಜನರಿಂದ ಅಡ್ವಾನ್ಸ್ ಹಣ ಪಡೆದುಕೊಂಡಿದೆ. ಆದರೆ ಇಲ್ಲಿವರೆಗೆ ಮಾತ್ರ ಸೈಟ್ ನೀಡಿಲ್ಲ.

ಇದನ್ನು ಕೇಳಲು ಹೋದ್ರೆ ಸಾಯಿಬಾಬಾ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮಾಲಕೀ ಕೌಶಲ್ಯ ಮಹೇಶ್ ಕತಮಗಾರ, ಸೈಟ್ ಕೊಡಲ್ಲ, ನಿಮ್ಮ ಅಡ್ವಾನ್ಸ್ ವಾಪಾಸ್ ಕೊಡಲ್ಲ ಏನು ಮಾಡಿಕೊಳ್ತೀರಾ ಮಾಡಿಕೊಳ್ಳಿ ಅಂತ ಅವಾಜ್ ಹಾಕುತ್ತಿದ್ದಾರಂತೆ. ಅಸಲಿಗೆ ಸಾಯಿಬಾಬ, ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ತಮ್ಮದು ಅಂತ ಮಾರಾಟ ಮಾಡಿರುವ ನಿವೇಶನದ ಜಾಗ ಅವರದ್ದೇ ಅಲ್ಲ.. ಧಾರವಾಡ ಜಿಲ್ಲೆಯ, ಹುಬ್ಬಳ್ಳಿ ತಾಲ್ಲೂಕಿನ,ಬಿಡನಾಳ ಗ್ರಾಮದ ಸರ್ವೇ ನಂಬರ್ 8/1, 8/2,8/3 ರಲ್ಲಿನ ಒಟ್ಟು ಹತ್ತು ಎಕರೆ ಜಾಗದಲ್ಲಿ ಕನಿಷ್ಟ ಐದು ಲಕ್ಷಕ್ಕೆ ಒಂದು ನಿವೇಶನದಂತೆ ಎರಡು ನೂರಕ್ಕೂ ಅಧಿಕ ನಿವೇಶನಗಳ ಅಡ್ವಾನ್ಸ್ ಹಣವನ್ನು ಪಡೆಯಲಾಗಿದೆ. ಇದರ ಒಟ್ಟು ಮೌಲ್ಯ ಏನಿಲ್ಲ ಅಂದರು ಮೂರು ಕೋಟಿ ಆಗಿದೆ.

ಈ ಜಾಗದ ಮೂಲ ಅಣ್ಣಪ್ಪ ಕೊಲ್ಲಾಪುರ, ಪರಶುರಾಮ ಕೊಲ್ಲಾಪುರ ಎಂಬ ರೈತರಿಗೆ ಸೇರಿದ್ದು, ಈ ಜಾಗವನ್ನು ಖರೀದಿ ಸಂಚಾಗಾರ ಪಡೆದುಕೊಂಡ, ಸಾಯಿಬಾಬಾ ಡೆವಲಪರ್ ಕೌಶಲ್ಯ ಅವರು, ಜಾಗ ಡೆವಲಪ್ಮೆಂಟ್ ಮಾಡಿ, ಸೈಟ್ ಮಾರಾಟ ಮಾಡಿ ಬಂದ ಹಣದಲ್ಲಿ ಜಮೀನು ನೀಡಿದ ರೈತರಿಗೆ ಹಣ ನೀಡುವ ಕರಾರು ಇತ್ತು. ಆದರೆ ಈಗ ರೈತರು ಮತ್ತು ಡೆವಲಪರ್ ನಡುವೆ ವೈಮನಸ್ಸು ಬೆಳೆದು, ಖರೀದಿ ಸಂಚಾಗಾರವನ್ನು ಕ್ಯಾನ್ಸಲ್ ಮಾಡಿಕೊಂಡಿದ್ದು, ಸೈಟ್ ಗಾಗಿ ಅಡ್ವಾನ್ಸ್ ಹಣ ನೀಡಿದವರು ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಒಟ್ಟಿನಲ್ಲಿ ಕಡಿಮೆ ದರದ ಸೈಟಿಗೆ ಆಸೆ ಪಟ್ಟ ಜನ ಈಗ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡಿದ್ದಾರೆ. ಜಮೀನು ಮತ್ತು ಡೆವಲಪರ್ ಜಗಳದಲ್ಲಿ ದುಡಿದು ತಿನ್ನುವ ಜನರ ಬದುಕು ಮೂರಾಬಟ್ಟೆಯಾಗಿದೆ.ಸದ್ಯ ಮೋಸಕ್ಕೆ ಒಳಗಾದ ಬಡವರು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ಪೊಲೀಸ್ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

-ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

04/12/2024 05:55 pm

Cinque Terre

33.78 K

Cinque Terre

9

ಸಂಬಂಧಿತ ಸುದ್ದಿ